Home › ಕರಾವಳಿಯಾದ್ಯಂತ ಭಾರೀ ಮಳೆ: ಜು.24ರವರೆಗೂ ಮಳೆಯಾರ್ಭಟ..!: ಹವಾಮಾನ ಇಲಾಖೆ ಮುನ್ಸೂಚನೆ
ಕರಾವಳಿಯಾದ್ಯಂತ ಭಾರೀ ಮಳೆ: ಜು.24ರವರೆಗೂ ಮಳೆಯಾರ್ಭಟ..!: ಹವಾಮಾನ ಇಲಾಖೆ ಮುನ್ಸೂಚನೆ
ONLINE PUDU / Thursday, July 18, 2024
ದ.ಕ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಜು.19ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದರೆ ಈ ಬಳಿಕವೂ ಮಳೆಯ ಆರ್ಭಟ ಕಡಿಮೆಯಾಗುವ ಮುನ್ಸೂಚನೆ ಇಲ್ಲ.
ಜುಲೈ 24ರವರೆಗೂ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 4 ದಿನಗಳಿಂದ ನಿರಂತರವಾಗಿ ಮಳೆಸುರಿಯುತ್ತಿದೆ.