ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಗುರುವಾಯನಕೆರೆ, ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ: ಕೆಲ ತಾಸು ವಾಹನ ಸಂಚಾರ ಬ್ಲಾಕ್:ತಕ್ಷಣ ಸ್ಪಂದಿಸಿದ ಮೆಸ್ಕಾಂ ಇಲಾಖೆ:

ಗುರುವಾಯನಕೆರೆ, ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ: ಕೆಲ ತಾಸು ವಾಹನ ಸಂಚಾರ ಬ್ಲಾಕ್:ತಕ್ಷಣ ಸ್ಪಂದಿಸಿದ ಮೆಸ್ಕಾಂ ಇಲಾಖೆ:

 

 

ಬೆಳ್ತಂಗಡಿ: ರಾತ್ರಿ ಸುರಿದ ಮಳೆಯಿಂದಾಗಿ ಹೆದ್ದಾರಿ ಬದಿಯ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ರಸ್ತೆಗೆ ಮುರಿದು ಬಿದ್ದು ವಾಹನ ಸಂಚಾರಕ್ಕೆ ಕೆಲ ತಾಸು ಅಡಚಣೆಯಾದ ಘಟನೆ ಗುರುವಾಯನಕೆರೆ ಬಳಿಯ ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ವರಕಬೆ ಎಂಬಲ್ಲಿ ನಡೆದಿದೆ. ಮರ ಬಿದ್ದು ಹಾನಿಗೊಳಗಾದ ವಿದ್ಯುತ್ ಕಂಬ ಸೇರಿದಂತೆ ತಂತಿಗಳನ್ನು ಮೆಸ್ಕಾಂ ಇಲಾಖೆಯ 33 ಕೆ.ವಿ.  ಸಿಬ್ಬಂದಿಗಳು ಹಾಗೂ ಸ್ಥಳೀಯ ಲೈನ್ ಮ್ಯಾನ್ ಗಳು  ತಕ್ಷಣ ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ವಿದ್ಯುತ್ ತಂತಿಯೊಂದು ಲಾರಿಯೊಂದರ ಮೇಲೆ ತುಂಡಾಗಿ ಬಿದಿದ್ದು  ಅದರೆ ಅಷ್ಟೋತ್ತಿಗಾಗಲೇ ವಿದ್ಯುತ್ ಇಲ್ಲದೇ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ  ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!