ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಿರಿಯ ಸಾಹಿತಿ ಪ್ರೊಫೆಸರ್ ಎನ್.ಜಿ. ಪಟವರ್ಧನ್ ನಿಧನ:

ಹಿರಿಯ ಸಾಹಿತಿ ಪ್ರೊಫೆಸರ್ ಎನ್.ಜಿ. ಪಟವರ್ಧನ್ ನಿಧನ:

 

 

 

 

ಬೆಳ್ತಂಗಡಿ; ತಾಲೂಕಿನ ಹಿರಿಯ ಸಾಹಿತಿ, ಉಜಿರೆ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್(81) ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1 ರಂದು ಕೊನೆಯುಸಿರೆಳೆದಿದ್ದಾರೆ.

ಮುಂಡಾಜೆ ಗ್ರಾಮದ ಮೂಲಾರು ಎಂಬಲ್ಲಿ ಮೂಲ ಮನೆ ಹೊಂದಿದ್ದ‌ ಅವರು ಕಳೆದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ನೆಲೆಸಿದ್ದರು. ಚಿತ್ಪಾವನ ಸಮಾಜದ ಹಿರಿಯರೂ ಆಗಿದ್ದ ಅವರು ಹಲವು ಕಥೆ, ಕವನ, ವಿಮರ್ಷೆ ರಚನಾಕರ್ತರಾಗಿದ್ದರು‌. ಅವರ ಹಲವು ಕೃತಿಗಳು ಸಾಹಿತ್ಯ ಲೋಕಕ್ಕೆ ಸಮರ್ಪಿತ ವಾಗಿತ್ತು. ಉತ್ತಮ ಶೋತೃ ಹಾಗೂ ಸಾಹಿತ್ಯ ವಿಷಯಾಸಕ್ತಿ ಹೊಂದಿದ್ದ ಅವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಷೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!