ಜುಲೈ 16ರಂದು ನಟಿ ಕತ್ರಿನಾ ಕೈಪ್ ಅವರ ಜನ್ಮದಿನವಿದ್ದು ಬರ್ತ್‍ಡೇಗೂ ಮುನ್ನ ಅವರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಜುಲೈ 14 ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ನಡೆದ ಹರಕೆ ಕೋಲದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ, ಪುತ್ರಿ, ಅಳಿಯನ ಜೊತೆ ಖ್ಯಾತ ನಟಿ ಕತ್ರಿನಾ ಕೈಫ್ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ.
ನಿನ್ನೆ ಬಾಲಿವುಡ್ ನ ದೊಡ್ಡ ತಂಡವೇ ಆಗಮಿಸಿದ ಕಾರಣದಿಂದ ಯಾರಿಗೂ ಫೋಟೋ ವೀಡಿಯೋಕ್ಕೆ ಅವಕಾಶವನ್ನು ನೀಡಿಲ್ಲ. ಇದರ ನಡುವೆಯೂ ಕ್ಷೇತ್ರದಲ್ಲಿದ್ದ ಕತ್ರಿನಾ ಕೈಫ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.