ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸೌತಡ್ಕ: ಮೋರಿಯಲ್ಲಿ ದನದ ಕರುವಿನ ಮೃತದೇಹ ಪತ್ತೆ: ಕೊಕ್ಕಡದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ: ಕಸಾಯಿಖಾನೆಗೆ ತಂದ ಕರು ಮೃತಪಟ್ಟ ಶಂಕೆ.!

ಸೌತಡ್ಕ: ಮೋರಿಯಲ್ಲಿ ದನದ ಕರುವಿನ ಮೃತದೇಹ ಪತ್ತೆ: ಕೊಕ್ಕಡದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ: ಕಸಾಯಿಖಾನೆಗೆ ತಂದ ಕರು ಮೃತಪಟ್ಟ ಶಂಕೆ.!

ಕೊಕ್ಕಡ: ಅಸುನೀಗಿದ ಕರುವಿನ ಅಂತ್ಯ ಸಂಸ್ಕಾರವನ್ನು ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮಾಡಿರುವ ಘಟನೆ ಜು.15ರಂದು ವರದಿಯಾಗಿದೆ.

 

ಕೊಕ್ಕಡದ ಸೌತಡ್ಕ ಬಳಿ ಅಪರಿಚಿತರು ಸತ್ತ ಕರುವೊಂದನ್ನು ಮೋರಿಗೆ ಎಸೆದು ಹೋಗಿದ್ದು ಈ ಬಗ್ಗೆ ಮಾಹಿತಿ ಪಡೆದ ಕೊಕ್ಕಡ ಪಿಡಿಓ ಅವರು ಕರುವಿನ ಅಂತ್ಯ ಸಂಸ್ಕಾರ ಮಾಡುವ ಉದ್ದೇಶದಿಂದ ಕೊಕ್ಕಡದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಸಂಘಟನೆಯ ಕಾರ್ಯಕರ್ತರು ಸತ್ತ ಕರುವನ್ನು ಮೋರಿಯಿಂದ ಹೊರತೆಗೆದು ಅಲ್ಲೇ ಸಮೀಪ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಕಸಾಯಿಖಾನೆಗೆ ತಂದ ಕರು ಮೃತಪಟ್ಟ ಶಂಕೆ

ಮೋರಿಯ ಸಮೀಪ ಗಾಡಿಯೊಂದು ನಿಂತ ಕುರುಹುಗಳು ಕಂಡುಬಂದಿದ್ದು, ಸಮೀಪದಲ್ಲೇ ಕಸಾಯಿಖಾನೆಯೂ ಕಾರ್ಯನಿರ್ವಹಿಸುತ್ತಿರುವುದರಿಂದ ಯಾರೋ ಕಿಡಿಗೇಡಿಗಳು ಕಸಾಯಿಖಾನೆಗೆ ತಂದ ಕರು ದಾರಿಮದ್ಯೆ ಸತ್ತಿರುವ ಕಾರಣ ಎಸೆದು ಹೋಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬAಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!