ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿಯಲ್ಲಿ ಭಾರೀ ಮಳೆ, ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ‌ ಮನವಿ: ತುರ್ತು ಸಂದರ್ಭಗಳಲ್ಲಿ‌ ಸಹಾಯವಾಣಿ ಸಂಪರ್ಕಿಸಲು ಸೂಚನೆ:ಹಗಲು ರಾತ್ರಿ ಸೇವೆಗಾಗಿ "ಶ್ರಮಿಕ" ಸೇವಾ ತಂಡ ಸಿದ್ದ:

ಬೆಳ್ತಂಗಡಿಯಲ್ಲಿ ಭಾರೀ ಮಳೆ, ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ‌ ಮನವಿ: ತುರ್ತು ಸಂದರ್ಭಗಳಲ್ಲಿ‌ ಸಹಾಯವಾಣಿ ಸಂಪರ್ಕಿಸಲು ಸೂಚನೆ:ಹಗಲು ರಾತ್ರಿ ಸೇವೆಗಾಗಿ "ಶ್ರಮಿಕ" ಸೇವಾ ತಂಡ ಸಿದ್ದ:

 

ಬೆಳ್ತಂಗಡಿ:ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು , ಎಚ್ಚರಿಕೆಯಿಂದ ಇರುವಂತೆ ತಾಲೂಕಿನ ಜನತೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ಮನವಿ ಮಾಡಿದ್ದಾರೆ.

 

 

ಜಿಲ್ಲೆಯ ಎಲ್ಲಾ ಜೀವ ನದಿಗಳು ಉಕ್ಕಿ ಹರಿಯುತ್ತಿದ್ದು ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯೂ ಭೂಕುಸಿತ ಹಾಗೂ ಮರಗಳು ರಸ್ತೆಗೆ ಉರುಳುತ್ತಿರುವ ಘಟನೆಗಳು ಈಗಾಗಲೇ ನಿಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಸಂಚಾರ ನಡೆಸುವ ಸಂದರ್ಭ ಅತ್ಯಂತ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ವಿನಂತಿಸುತ್ತ.

ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಜನರು ಕೂಡ ತಮ್ಮ ರಕ್ಷಣೆ ಹಾಗೂ ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ಯಾವುದೇ ರೀತಿಯ ಅಪಾಯದ ಮುನ್ಸೂಚನೆ ದೊರೆತ ತಕ್ಷಣ ನಮ್ಮ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗೂ ' ಶ್ರಮಿಕ ' ತಂಡ ನಿಮ್ಮ ಸಹಾಯಕ್ಕೆ ಸನ್ನದ್ಧವಾಗಿದ್ದು ಈ ಕೆಳಗೆ ನೀಡಲಾದ ತುರ್ತು ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಹಗಲು ರಾತ್ರಿಯೆನ್ನದೆ ಯಾವುದೇ ಸಮಯದಲ್ಲಾದರೂ ಸಹಾಯಕ್ಕೆ ತಂಡ ಸದಾ ಸಿದ್ಧವಾಗಿದೆ.ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!