Home › ಹತ್ರಾಸ್ ಕಾಲ್ತುಳಿತ: ಸ್ಮಶಾನದಂತಾದ ಆಸ್ಪತ್ರೆ: ಹೆಣಗಳ ರಾಶಿ ನೋಡಿ ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹೃದಯಾಘಾತ
ಹತ್ರಾಸ್ ಕಾಲ್ತುಳಿತ: ಸ್ಮಶಾನದಂತಾದ ಆಸ್ಪತ್ರೆ: ಹೆಣಗಳ ರಾಶಿ ನೋಡಿ ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹೃದಯಾಘಾತ
ONLINE PUDU / Wednesday, July 03, 2024
ಹತ್ರಾಸ್ : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾಗಿ 121 ಜನರು ಸಾವನ್ನಪ್ಪಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿ ಪೊಲೀಸ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ ಎಂದು ತಿಳಿದು ಬಂದಿದೆ.
ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ರಜನೀಶ್ ಎಂಬ ಪೋಲೀಸ್ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿ ಜೊತೆಗೆ ಗೋಳಾಡುತ್ತಿದ್ದ ಸಾವಿರಾರು ಜನರನ್ನು ನೋಡಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.