ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪ್ರಜಾಪ್ರಕಾಶ ನ್ಯೂಸ್ ವರದಿ ಫಲಶ್ರುತಿ: ಬೆಳ್ತಂಗಡಿ ಟ್ರೀ ಪಾರ್ಕ್ ರಸ್ತೆಯ ಸಮಸ್ಯೆಗೆ ಅಧಿಕಾರಿಗಳ ಸ್ಪಂದನೆ: ಅಪಾಯಕಾರಿ ಮರ, ತೆರವುಗೊಳಿಸಿದ ಅರಣ್ಯ ಇಲಾಖೆ: ಎಚ್ಚರಿಕೆ ನಾಮಫಲಕ ಅಳವಡಿಸಿದ ಪಟ್ಟಣ.ಪಂಚಾಯತ್:

ಪ್ರಜಾಪ್ರಕಾಶ ನ್ಯೂಸ್ ವರದಿ ಫಲಶ್ರುತಿ: ಬೆಳ್ತಂಗಡಿ ಟ್ರೀ ಪಾರ್ಕ್ ರಸ್ತೆಯ ಸಮಸ್ಯೆಗೆ ಅಧಿಕಾರಿಗಳ ಸ್ಪಂದನೆ: ಅಪಾಯಕಾರಿ ಮರ, ತೆರವುಗೊಳಿಸಿದ ಅರಣ್ಯ ಇಲಾಖೆ: ಎಚ್ಚರಿಕೆ ನಾಮಫಲಕ ಅಳವಡಿಸಿದ ಪಟ್ಟಣ.ಪಂಚಾಯತ್:

 

 

ಬೆಳ್ತಂಗಡಿ: ನಗರದ ಕಲ್ಲಗುಡ್ಡೆಯಲ್ಲಿರುವ  ಟ್ರೀ ಪಾರ್ಕ್ ಹೋಗುವ ರಸ್ತೆಯ ಕಾಮಗಾರಿ ಕಳಪೆ ಗುಣಮಟ್ಟದಿಂದಾಗಿ ಮಳೆ ಪ್ರಾರಂಭದಲ್ಲೇ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ.

 

 

ಈ ರಸ್ತೆಯಲ್ಲಿ ಘನ ಸೇರಿದಂತೆ  ವಾಹನ ಸಂಚಾರ ಅಪಾಯಕಾರಿಯಾಗಿತ್ತು. ಅದಲ್ಲದೇ ಅದೇ ರಸ್ತೆಯ ಬದಿಯಲ್ಲಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿತ್ತಲ್ಲದೇ ಅದರ ಅಡಿಯಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಸಾರ್ವಜನಿಕ ಅಪಾಯದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ಕ್ರತ ವರದಿಯನ್ನು ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದು, ಇದೀಗ ಅರಣ್ಯ ಇಲಾಖೆ ಹಾಗೂ ನಗರ ಪಂಚಾಯತ್ ಸ್ಪಂದಿಸಿ ಅಪಾಯಕಾರಿ ಮರ ಹಾಗೂ ಘನ ವಾಹನ ಸಂಚಾರ ನಿಷೇಧಿಸಿ ನಾಮಫಲಕವನ್ನು ಅಳವಡಿಸಿದೆ.

ಪ್ರಜಾಪ್ರಕಾಶ ನ್ಯೂಸ್ ವರದಿಯ ಬೆನ್ನಲ್ಲೇ ಸ್ಪಂದಿಸಿದ ಅಧಿಕಾರಿಗಳಿಗೆ ಹಾಗೂ ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದರಲ್ಲದೇ ಶೀಘ್ರದಲ್ಲೇ ಕುಸಿತಕ್ಕೊಳಗಾದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.

 

https://youtu.be/2ITq_hkgW38?si=ViBqv8mEP3bWy0g4

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!