ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ, ಭಾರೀ ಮಳೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ: ಪುತ್ರಬೈಲು ಮತ್ತೆ ರಸ್ತೆಗೆ ನುಗ್ಗಿದ ನೀರು: ಅಲ್ಲಲ್ಲಿ ಭೂಕುಸಿತ, ತತ್ತರಿಸಿದ ಜನ:

ಬೆಳ್ತಂಗಡಿ, ಭಾರೀ ಮಳೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ: ಪುತ್ರಬೈಲು ಮತ್ತೆ ರಸ್ತೆಗೆ ನುಗ್ಗಿದ ನೀರು: ಅಲ್ಲಲ್ಲಿ ಭೂಕುಸಿತ, ತತ್ತರಿಸಿದ ಜನ:

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು ಮತ್ತೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಸುರಿದ ಭಾರೀ ಮಳೆಗೆ ತಾಲೂಕಿನ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿ ಜನರು ಆತಂಕದಲ್ಲಿ ಇರುವ ಮಧ್ಯೆಯೇ ಇವತ್ತು ಸಂಜೆಯಿಂದ ಮತ್ತೆ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರಿನ‌ ಮಟ್ಟ ಏರಿಕೆಯಾಗುತ್ತಿದೆ. ಲಾಯಿಲ ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ರಸ್ತೆಗೆ ನೀರು ನುಗ್ಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಗುರುವಾಯನಕೆರೆ ಮಸೀದಿ ಬದಿ ಕುಸಿತಗೊಂಡು ಮಸೀದಿಯ ಕಟ್ಟಡಕ್ಕೂ ಅಪಾಯವಾಗುವ ಸಾಧ್ಯತೆ ಇದೆ, ಸವಣಾಲು ಬಳಿ ಹಲವು ಕಡೆಗಳಲ್ಲಿ ಗುಡ್ಡ ಕುಸಿತಗೊಂಡಿದ್ದು ಕೆಲವರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.ತಾಲೂಕಿನೆಲ್ಲೆಡೆ  ವಿವಿಧ ರೀತಿಯಲ್ಲಿ ಹಾನಿ ಸಂಭವಿಸುತ್ತಿದ್ದು ರಾತ್ರಿ ಜನರು ನಿದ್ದೆ ಮಾಡದಂತಾಗಿದೆಯಲ್ಲದೇ ನೆರೆ ಭೀತಿಯ ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ.

 

 

ಜಾಹಿರಾತು

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!