ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ: ಕಾಲಲ್ಲಿ ತುಳಿದು ಅಣ್ಣಪ್ಪ ದೈವದ ಗುಡಿಯ ಬಾಗಿಲು ತೆರೆದ ಯುವಕ: ಮೇಲ್ಛಾವಣಿ ಮೇಲೇರಿ ದಾಂದಲೆ.! ಅಣ್ಣಪ್ಪ ದೈವದ ಕಡ್ತಲೆ ಹಿಡಿದು ವಿಚಿತ್ರ ವರ್ತನೆ..!

ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ: ಕಾಲಲ್ಲಿ ತುಳಿದು ಅಣ್ಣಪ್ಪ ದೈವದ ಗುಡಿಯ ಬಾಗಿಲು ತೆರೆದ ಯುವಕ: ಮೇಲ್ಛಾವಣಿ ಮೇಲೇರಿ ದಾಂದಲೆ.! ಅಣ್ಣಪ್ಪ ದೈವದ ಕಡ್ತಲೆ ಹಿಡಿದು ವಿಚಿತ್ರ ವರ್ತನೆ..!

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯದ ಒಳಗೆ ಏಕಾಏಕಿ ನುಗ್ಗಿದ ಯುವಕನೋರ್ವ ಹುಚ್ಚಾಟ ನಡೆಸಿದ ಘಟನೆ ಜು.09ರಂದು ಸಂಭವಿಸಿದೆ.

ಉಳ್ಳಾಲ ನಿವಾಸಿ ದಿವಾಕರ ಆಚಾರ್ಯ ಎಂಬಾತ (35) ಎಂಬಾತ ನಿನ್ನೆ ಬೆಳಗ್ಗೆ ಬೈಕ್ ಚಲಾಯಿಸಿಕೊಂಡು ನೇರವಾಗಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿ, ದೇವಸ್ಥಾನದೊಳಗೆ ರಂಪ ನಡೆಸಿದ್ದಾನೆ. ಅಲ್ಲದೆ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂಭಾಗಕ್ಕೆ ತೆರಳಿ ಕಾಲಿನಿಂದ ಬಾಗಿಲನ್ನು ಒದ್ದು, ದೈವದ ಕಡ್ತಲೆಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮಾಡಿದ್ದಾನೆ. ಮೇಲ್ಛಾವಣಿ ಮೇಲೇರಿ ಹಾನಿ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಅರ್ಚಕರ ಮೇಲೂ ಹಲ್ಲೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದವರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಆರೋಪಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!