ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆ, ಪೆರೋಡಿತ್ತಾಯ ಕಟ್ಟೆ ಪ್ರಯಾಣಿಕರ ತಂಗುದಾಣ ಕುಸಿತ:

ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆ, ಪೆರೋಡಿತ್ತಾಯ ಕಟ್ಟೆ ಪ್ರಯಾಣಿಕರ ತಂಗುದಾಣ ಕುಸಿತ:

 

ಬೆಳ್ತಂಗಡಿ: ತಾಲೂಕಿನಲ್ಲಿ ನಿರಂತರ ಭಾರೀ ಮಳೆಯಾಗುತಿದ್ದು ಅಲ್ಲಲ್ಲಿ ಗುಡ್ಡ ಕುಸಿತ, ಮರ ಉರುಳಿ ಬೀಳುವುದು, ಮನೆಗಳಿಗೆ ಹಾನಿಗಳಂತಹ‌ ಪ್ರಕೃತಿ ವಿಕೋಪಗಳು  ಸಂಭವಿಸುತ್ತಿದೆ, ನದಿಗಳಲ್ಲಿ ನೀರಿನ‌ ಮಟ್ಟ ಹೆಚ್ಚಾಗಿದೆ. ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯ ಕಟ್ಟೆ ಬಳಿ ಪ್ರಯಾಣಿಕರ ತಂಗುದಾಣವೊಂದು ಮಳೆಗೆ  ಕುಸಿದು ಬಿದ್ದಿದೆ ಜನ ಸಂಚಾರ ಇಲ್ಲದ ಕಾರಣದಿಂದಾಗಿ  ಯಾವುದೇ ಅನಾಹುತ ಸಂಭವಿಸಿಲ್ಲ. ದ.ಕ.ಸೇರಿದಂತೆ ‌ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ಎರಡು ದಿನಗಳಿಂದ ರಜೆ ಸಾರಲಾಗಿದೆ. ಮುಂದಿನ ಎರಡು ದಿನ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!