ಬಾಬು ಮಡಿವಾಳ ಎಂಬವರ ಪತ್ನಿ ಮೋಹಿನಿ (60) ಎಂಬವರು ಜು.21ರ ಭಾನುವಾರ ಸಂಜೆ ಕೂಲಿ ಕೆಲಸ ಬಿಟ್ಟು ಅಂಗಡಿಗೆ ತೆರಳಿದ್ದು, ಬಳಿಕ ಮನೆಗೆ ವಾಪಾಸ್ ಬಾರದಿದ್ದಾಗ ಮನೆಯವರು ಹುಡುಕಾಡಿದ್ದಾರೆ. ಆದರೆ ಅವರೆಲ್ಲೂ ಪತ್ತೆಯಾಗಿರಲಿಲ್ಲ. ಇಂದು (ಜು.22) ಬಂಗಾಡಿ ಸಹಸ್ರ ನಾಗಬನ ದೇವಸ್ಥಾನದ ಬಳಿ ಅವರ ಮೃತದೇಹ ಪತ್ತೆಯಾಗಿದೆ.
ಬೆದ್ರಬೆಟ್ಟು ಬಳಿ ತೊರೆ ದಾಟುವ ವೇಳೆ ನೀರಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.