ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಾಲೂಕಿನಾದ್ಯಂತ ಬಿರುಗಾಳಿ, ಮಳೆ: ಮನೆ, ವಿದ್ಯುತ್ ಕಂಬಗಳಿಗೆ ಹಾನಿ

ತಾಲೂಕಿನಾದ್ಯಂತ ಬಿರುಗಾಳಿ, ಮಳೆ: ಮನೆ, ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ತಾಲೂಕಿನಾದ್ಯಂತ ಜು.26ರ ರಾತ್ರಿ ಸುರಿದ ಭಾರೀ ಬಿರುಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮಾಲಾಡಿ, ಸೋಣಂದೂರು ಗ್ರಾಮದಲ್ಲಿ, 13 ವಾಸದ ಮನೆ 1 ವಾಣಿಜ್ಯ ಕಟ್ಟಡ 1 ಆಶ್ರಮ ಕಟ್ಟಡ 2 ವಿದ್ಯುತ್ ಟ್ರಾನ್ಸ್ ಫಾರ್ಮರ್ 11 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಗ್ರಾಮದ ಒಳ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ. ಕೊಕ್ಕಡ ಗ್ರಾಮದ ಕಲಾಯಿ ಎಸ್ಟೇಟ್ ನಲ್ಲಿ ಕೆಲಸದವರು ವಾಸ್ತವ್ಯ ಇದ್ದ ಮನೆಗೆ ನಿನ್ನೆ ರಾತ್ರಿ ಮರ ಬಿದ್ದು ಮನೆ ಭಾಗಷಃ ಹಾನಿಯಾಗಿದೆ. ಅತ್ತಿಲ ದೇವಸ್ಥಾನದ ಬಳಿ ಇರುವ ರಸ್ತೆಯುದ್ದ ಸುಮಾರು 150ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು ಪರ್ಲ ಹಾಗೂ ಬಯಲಿಗೆ ಹೋಗುವ ರಸ್ತೆ ಸಂಚಾರ ಸ್ಥಗಿತವಾಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!