Home › ಸ.ಪ.ಪೂ ಕಾಲೇಜು ಪುಂಜಾಲಕಟ್ಟೆ : ವಿದ್ಯಾರ್ಥಿ ಸಂಘ ಉದ್ಘಾಟನೆ: ಕಾಲೇಜ್ ಜೀವನವನ್ನು ಮೆಲುಕು ಹಾಕಿದ ಶಾಸಕ ಹರೀಶ್ ಪೂಂಜ
ಸ.ಪ.ಪೂ ಕಾಲೇಜು ಪುಂಜಾಲಕಟ್ಟೆ : ವಿದ್ಯಾರ್ಥಿ ಸಂಘ ಉದ್ಘಾಟನೆ: ಕಾಲೇಜ್ ಜೀವನವನ್ನು ಮೆಲುಕು ಹಾಕಿದ ಶಾಸಕ ಹರೀಶ್ ಪೂಂಜ
ONLINE PUDU / Tuesday, July 09, 2024
ಪುಂಜಾಲಕಟ್ಟೆ; ಸರಕಾರಿ ಪದವಿಪೂರ್ವ ಕಾಲೇಜು ಪುಂಜಾಲಕಟ್ಟೆ ಇದರ ವಿದ್ಯಾರ್ಥಿ ಸಂಘವನ್ನು ಜು.08ರಂದು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಇದೇ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಬಗ್ಗೆ, ಕಾಲೇಜು ವಿಧ್ಯಾರ್ಥಿ ಸಂಘದ ನಾಯಕನಾಗಿ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡ ಬಗ್ಗೆ, ಅಂತಹ ಅವಕಾಶವನ್ನು ನೀಡಿದ ಕಾಲೇಜು ದಿನಗಳನ್ನು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಂಡರು