ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ‘ಕಾಂಗ್ರೇಸ್ ತನ್ನ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದೆ?: ರಮಾನಾಥ ರೈ ಕಾಂಗ್ರೇಸ್ ನಾಯಕರನ್ನು ತಿದ್ದುವ ಬದಲು ಗುಲಾಮಗಿರಿಗೆ ಇಳಿದದ್ದು ದುರಾದೃಷ್ಟ: ಹಿಂದುತ್ವವೇ ಮುಖ್ಯ ಎಂಬ ಶಾಸಕ ಭರತ್ ಶೆಟ್ಟಿಯನ್ನು ಮೂದಲಿಸುವುದು ಹಾಸ್ಯಾಸ್ಪದ’: ನಂದನ ಮಲ್ಯ

‘ಕಾಂಗ್ರೇಸ್ ತನ್ನ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದೆ?: ರಮಾನಾಥ ರೈ ಕಾಂಗ್ರೇಸ್ ನಾಯಕರನ್ನು ತಿದ್ದುವ ಬದಲು ಗುಲಾಮಗಿರಿಗೆ ಇಳಿದದ್ದು ದುರಾದೃಷ್ಟ: ಹಿಂದುತ್ವವೇ ಮುಖ್ಯ ಎಂಬ ಶಾಸಕ ಭರತ್ ಶೆಟ್ಟಿಯನ್ನು ಮೂದಲಿಸುವುದು ಹಾಸ್ಯಾಸ್ಪದ’: ನಂದನ ಮಲ್ಯ

ಬೆಳ್ತಂಗಡಿ: ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ ದೊಡ್ಡ ಹಿಂದು ಎಂದು ತಿರುಗಾಡುತ್ತಾ, ಚುನಾವಣೆ ಮುಗಿದ ತಕ್ಷಣ ರಾಹುಲ್ ಗಾಂಧಿಯವರು ತಾನು ಹಿಂದೂ ವಿರೋಧಿಯಾಗಿ ಬದಲಾಗಿ ನಿಜಬಣ್ಣ ತೋರಿಸಿದರು ಎಂದು ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ನಂದನ ಮಲ್ಯ ಹೇಳಿದ್ದಾರೆ.

ಅವರು ಜು.09ರಂದು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ನವದೆಹಲಿಯಲ್ಲಿ ನಡೆದ ಸಂಸತ್ತಿನ ಅಧಿವೇಶನ ಸದನದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದರು. ‘ಸಂಸತ್ತಿನಲ್ಲಿ ಹಿಂದುಗಳನ್ನು ಹಿಂಸೆ ಮಾಡುವವರು, ಅಸತ್ಯ ಮಾತಾಡುವವರು ಎಂದು ಇಡೀಯ ಹಿಂದೂ ಸಮಾಜವನ್ನು ಮೂದಲಿಸಿದರು. ಅಡ್ವಾಣಿ ಅವರ ಹಿಂದುತ್ವದ ಆಂದೋಲನವನ್ನು ಇದೀಗ ಹೊಸಕಿ ಹಾಕಿದ್ದೇವೆ ಎಂದು ತಮ್ಮ ಹಿಂದೂ ದ್ವೇಷವನ್ನು ಮತ್ತೆ ಸಾಬೀತುಪಡಿಸಿದರು. ಸಂಸತ್ತಿನಲ್ಲಿ ಏನೂ ಮಾತಾಡಿದರೂ ಕಾನೂನು ಸಂರಕ್ಷಣೆ ಸಿಗುತ್ತೆ ಎಂಬುದನ್ನು ಅರಿತು ಈ ಅವಕಾಶವನ್ನು ದುರುಪಯೋಗ ಪಡಿಸಿ ಹಿಂದೂಗಳ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸದರು.

ಡಿ ಎಂ ಕೆ ಮುಖಂಡ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮವನ್ನು ಮೂಲ ಸರ್ವ ನಾಶ ಮಾಡಬೇಕು ಎಂದಾಗ ಇವರು ಸುಮ್ಮನಿದ್ದರು. ಕೇರಳದಲ್ಲಿ ಮುಸ್ಲಿಂ ಲೀಗ್ ದೇವಸ್ಥಾನದ ಮುಂದೆ ಹಿಂದುಗಳನ್ನು ಸುಟ್ಟುಹಾಕಬೇಕು ಅಂದಾಗಲೂ ಮೌನ. ಟಿ ಸಿ ಎಂನ ಮೇಯರ್ ಎಲ್ಲರನ್ನು ಮುಸ್ಲಿಂ ಮತಕ್ಕೆ ಮತಾಂತರ ಮಾಡಬೇಕು ಎಂದು ಸಾರ್ವಜನಿಕವಾಗಿ ಮಾತಾಡಿದರೂ ಕಾಂಗ್ರೇಸ್ ಮೌನ ಸಮ್ಮತಿ ಎಂದರು.

ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದವರು, ಇವರ ಯುಪಿಎ ಸರಕಾರದಲ್ಲಿ ರಾಮ ದೇವರು ಕೇವಲ ಕಾಲ್ಪನಿಕ ಅಂತ ಅಫಿಡವಿಟ್ ಸಲ್ಲಿಸಿದ ಈ ಕಾಂಗ್ರೇಸ್ ತಮ್ಮ ಎಪ್ಪತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದರು ಎಂಬ ಪಟ್ಟಿ ಕೊಡಲಿ ಎಂದರು.

ದ.ಕ. ಕಾಂಗ್ರೇಸ್ ನ ಹಿರಿಯರಾದ ರಮಾನಾಥ ರೈ ಅವರು ಈ ಬಾಲ ಬುದ್ದಿಯ ಕಾಂಗ್ರೇಸ್ ನಾಯಕರನ್ನು ತಿದ್ದುವ ಬದಲು ಅಧಿಕಾರದ ಆಸೆಗೆ ಅವರ ಗುಲಾಮಗಿರಿಗೆ ಇಳಿದದ್ದು ದುರಾದೃಷ್ಟ. ತನಗೆ ಶಾಸಕ ಸ್ಥಾನಕ್ಕಿಂತ ಹಿಂದುತ್ವವೇ ಮುಖ್ಯ ಎಂಬ ತತ್ವ ಆರಿಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದಿರುವ ನಮ್ಮ ಶಾಸಕರಾದ ಭರತ್ ಶೆಟ್ಟಿ ಅವರನ್ನು ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಐವನ್ ಡಿಸೋಜಾ ಮೂದಲಿಸಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೇಸ್‌ನ ಈ ಓಲೈಕೆ ರಾಜಕಾರಣಕ್ಕೆ ಹಾಗೂ ಹಿಂದೂ ಧರ್ಮದ ವಿರೋಧಿ ರಾಜಕಾರಣಕ್ಕೆ ಧಿಕ್ಕಾರವಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ಅರುಣ್ ಜಿ ಶೆಟ್, ಯುವ ಮೋರ್ಚಾದ ಪ್ರಮುಖರಾದ ಭರತರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಪ್ರಕಾಶ್ ಗರೋಡಿ, ವರುಣ್ ಅಂಬಟ್, ನಿಶಾನ್ ಪೂಜಾರಿ, ಅವಿನಾಶ್ ಸುವರ್ಣ ಹಾಗೂ ರಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!