ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಇಂದಬೆಟ್ಟು: ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಸಾಗುವ ರಸ್ತೆ ಅಸ್ತವ್ಯಸ್ಥ: 4 ವರ್ಷಗಳಿಂದ ಮನವಿ ನೀಡಿದರೂ ಜನಪ್ರತಿನಿಧಿಗಳು ಮೌನ: ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 1 ರೂಪಾಯಿ ಸಹಾಯಧನ ನೀಡುವಂತೆ ಬ್ಯಾನರ್ ಅಳವಡಿಕೆ..!

ಇಂದಬೆಟ್ಟು: ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಸಾಗುವ ರಸ್ತೆ ಅಸ್ತವ್ಯಸ್ಥ: 4 ವರ್ಷಗಳಿಂದ ಮನವಿ ನೀಡಿದರೂ ಜನಪ್ರತಿನಿಧಿಗಳು ಮೌನ: ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 1 ರೂಪಾಯಿ ಸಹಾಯಧನ ನೀಡುವಂತೆ ಬ್ಯಾನರ್ ಅಳವಡಿಕೆ..!

ಬೆಳ್ತಂಗಡಿ: ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಇಂದಬೆಟ್ಟು ಗ್ರಾಮದ ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ತೆರಳು ರಸ್ತೆ ಹದಗೆಟ್ಟಿದ್ದು ಕಳೆದ 4 ವರ್ಷಗಳಿಂದ ಅಭಿವೃದ್ಧಿ ಪಡಿಸುವಂತೆ ಮನವಿ ನೀಡಲಾಗುತ್ತಿದೆ. ಆದರೆ ಜನಪ್ರತಿನಿಧಿಗಳು ಮೌನವಾಗಿದ್ದು ಇದರಿಂದ ಆಕ್ರೋಶಗೊಂಡ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಾಮಾಜಿಕ ಹೋರಾಟಗಾರ ವೆಂಕಪ್ಪ ಕೋಟ್ಯಾನ್ 1 ರೂಪಾಯಿ ಸಹಾಯಧನ ನೀಡುವಂತೆ ಬ್ಯಾನರ್ ಅಳವಡಿಸಿ, ಅದರ ಕೆಳಗೆ ಹಣ ಸಂಗ್ರಹಕ್ಕೆ ಬಕೆಟ್ ಇಟ್ಟು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಪ್ರಸಿದ್ಧವಾಗಿರುವ ದೇವಸ್ಥಾನಕ್ಕೆ ದಿನನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ರಸ್ತೆ ಇದ್ದರೂ ವಾಹನ ಹೋಗುವ ಹಾಗಿಲ್ಲ. ಅಲ್ಲದೆ ಕಾಲ್ನಡಿಗೆಯಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಸೇರಿದಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಾಲ್ಕೆದು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದಬೆಟ್ಟು ಗ್ರಾಮಸಭೆಯಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಯಾಗಿದೆ, ಆದರೂ ಪರಿಹಾರ ಶೂನ್ಯವಾಗಿದೆ. ಇದರಿಂದ ಬೆಸೆತ್ತ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಾಮಾಜಿಕ ಹೋರಾಟಗಾರ ವೆಂಕಪ್ಪ ಕೋಟ್ಯಾನ್ ರವರು ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಯಲ್ಲಿ "ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಮಗಾರಿ ಮಾಡಲು ತಮ್ಮಿಂದ 1 ರೂಪಾಯಿ ಸಹಾಯಧನ ನೀಡಬೇಕಾಗಿ ವಿನಂಬ್ರ ವಿನಂತಿ " ಎಂದು ಕೈ ಬರಹದ ಬ್ಯಾನರ್ ಅಳವಡಿಸಿದ್ದು , ಅದರ ಕೆಳಗೆ ಬಕೆಟ್ ನ್ನು ಇಟ್ಟಿದ್ದಾರೆ.

ಸದ್ಯ ಈ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು , ಚರ್ಚೆಗೂ ಗ್ರಾಸವಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!