Home › 78ನೇ ಸ್ವಾತಂತ್ಯೋತ್ಸವ ಸಂಭ್ರಮದಲ್ಲಿ ಗಮನ ಸೆಳೆದ ಮಹಾಲಕ್ಷ್ಮಿ ಆನೆ: ಕಟೀಲು ಶ್ರೀಕ್ಷೇತ್ರದ ಆನೆಯಿಂದ ಧ್ವಜ ವಂದನೆ
78ನೇ ಸ್ವಾತಂತ್ಯೋತ್ಸವ ಸಂಭ್ರಮದಲ್ಲಿ ಗಮನ ಸೆಳೆದ ಮಹಾಲಕ್ಷ್ಮಿ ಆನೆ: ಕಟೀಲು ಶ್ರೀಕ್ಷೇತ್ರದ ಆನೆಯಿಂದ ಧ್ವಜ ವಂದನೆ
ONLINE PUDU / Friday, August 16, 2024
ಕಟೀಲು: 78ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ನಡೆದ ಧ್ವಜಾರೋಹಣ ಸಂದರ್ಭ ದೇಗುಲದ ಆನೆಯಿಂದ ವಿಶೇಷ ಧ್ವಜ ವಂದನೆ ನೆರವೇರಿತು.
ಸೇನಾಧಿಕಾರಿ ಸುಬೇದಾರ್ ಉದಯಚಂದ್ರ ಉಡುಪ ಅವರು ಧ್ವಜಾರೋಹಣ ನೆರವೇರಿಸಿದ್ದು, ಈ ಮೊದಲು ಕಟೀಲು ದೇವಳದ ಆನೆ ಮಹಾಲಕ್ಷ್ಮಿ ಸುಬೇದಾರ್ ಉದಯಚಂದ್ರ ಉಡುಪ ಅವರಿಗೆ ಧ್ವಜವನ್ನು ನೀಡಿ ವಂದನೆ ಸಲ್ಲಿಸಿತು. ಬಳಿಕ ಧ್ವಜಸ್ತಂಭದ ಮುಂದೆ ನಿಂತು ಮೂರು ಬಾರಿ ಘೀಳಿಟ್ಟು ಧ್ವಜ ವಂದನೆ ಮಾಡಿತು.
ಈ ಅಪೂರ್ವ ದೃಶ್ಯವನ್ನು ದೇವಸ್ಥಾನದ ಅರ್ಚಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಆಡಳಿತ ಮಂಡಳಿ ಸೇರಿದಂತೆ ಇತರರು ಕಣ್ತುಂಬಿಕೊಂಡಿದ್ದಾರೆ.