Home › ಬಾಳೆ ತೋಟದಲ್ಲಿ ಮಹಿಳೆಯ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ: ಬಾಳೆ ತೋಟದ ಮಾಲೀಕ ನಾಪತ್ತೆ..!
ಬಾಳೆ ತೋಟದಲ್ಲಿ ಮಹಿಳೆಯ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ: ಬಾಳೆ ತೋಟದ ಮಾಲೀಕ ನಾಪತ್ತೆ..!
ONLINE PUDU / Saturday, August 24, 2024
ಮೈಸೂರು: ಬಾಳೆ ತೋಟದಲ್ಲಿ ಮಹಿಳೆಯೋರ್ವರ ಶವ ಪತ್ತೆಯಾದ ಘಟನೆ ನಂಜನಗೂಡ ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಗಟ್ಟವಾಡಿ ಗ್ರಾಮದ ಶಶಿಕಲಾ (38) ಎಂಬವರು ಕೊಲೆಯಾಗಿ ಪತ್ತೆಯಾಗಿದ್ದು ಅತ್ಯಾಚಾರ ನಡೆದ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಳೆ ತೋಟದ ಮಾಲೀಕ ಗ್ರಾಮದಿಂದ ನಾಪತ್ತೆಯಾಗಿದ್ದು ನಂಜನಗೂಡಿನ ಡಿವೈಎಸ್ಪಿ ರಘು ಪಿಎಸ್ಐ ಲಕ್ಷ್ಮಿಕಾಂತ ಕೋಳಿ, ಚೇತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.