ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳಾಲ್,ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ ಆರೋಪಿಗಳ ಮನೆಯಿಂದ ಕೊಲೆಗೆ ಬಳಸಿದ ವಸ್ತು ವಶಕ್ಕೆ

ಬೆಳಾಲ್,ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ ಆರೋಪಿಗಳ ಮನೆಯಿಂದ ಕೊಲೆಗೆ ಬಳಸಿದ ವಸ್ತು ವಶಕ್ಕೆ

 

 

 

ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆ.26 ರಂದು ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಆ.28 ರಂದು ಮಧ್ಯಾಹ್ನ ಕಾಸರಗೋಡು ಮನೆಗೆ ತೆರಳಿದ ಧರ್ಮಸ್ಥಳ ಪೊಲೀಸರ ತಂಡ ಕೊಲೆಗೆ ಬಳಸಿದ ಬೈಕ್, ಕತ್ತಿ , ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ   ಕಾಸರಗೋಡು ತಾಲೂಕಿನ ಕುಂಬ್ರಾಜೆ ಗ್ರಾಮದ  ನಿವಾಸಿಯಾಗಿರುವ ಆಳಿಯ ರಾಘವೇಂದ್ರ ಕೆಧಿಲಾಯ( 53) ಮತ್ತು ಮೊಮ್ಮಗ ಮುರುಳಿಕೃಷ್ಣ (21) ಅವರನ್ನು ಸ್ಥಳ ಮಹಜರು ನಡೆಸಲು ಆ.28 ರಂದು ಆರೋಪಿಗಳ ಕಾಸರಗೋಡು ಮನೆಗೆ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣೀರ ಹಾಗೂ ಸಿಬ್ಬಂದಿ ತಂಡದವರು ಹೋಗಿದ್ದು ಈ ವೇಳೆ ಕೊಲೆಗೆ ಬಳಸಿದ ಹೀರೋ ಕಂಪನಿಯ ಒಂದು ಬೈಕ್ , ಒಂದು ಕತ್ತಿ ,  ಆರೋಪಿಗಳ ಬಟ್ಟೆಯನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!