ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪ್ರೀತಿಸಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ: ಸ್ನೇಹಿತನಿಗೆ ವಾಯ್ಸ್ ಮೆಸೇಜ್: ಡೆತ್ ನೋಟ್ ನಲ್ಲಿ ಯುವತಿಯ ಹೆಸರು, ಮೊಬೈಲ್ ನಂಬರ್..!

ಪ್ರೀತಿಸಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ: ಸ್ನೇಹಿತನಿಗೆ ವಾಯ್ಸ್ ಮೆಸೇಜ್: ಡೆತ್ ನೋಟ್ ನಲ್ಲಿ ಯುವತಿಯ ಹೆಸರು, ಮೊಬೈಲ್ ನಂಬರ್..!

ಮಂಗಳೂರು: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ತನ್ನಿಂದ ದೂರವಾಗಲು ಯತ್ನಿಸಿದಕ್ಕೆ ಖಿನ್ನತೆಗೊಳಗಾಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ತಾರೆಮಾರ್ ಅರ್ಭಿ ಎಂಬಲ್ಲಿ ಸಂಭವಿಸಿದೆ.

ಮೇಸ್ತ್ರಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ (32) ಎಂಬಾತ ಯುವತಿಯೋರ್ವಳನ್ನು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಆದರೆ ಆಕೆ ದೂರವಾಗಲು ಯತ್ನಿಸಿದಾಗ ಖಿನ್ನತೆಗೊಳಗಾಗಿ ಆತ್ಮಹತ್ಯೆಯ ಯೋಚನೆ ಮಾಡಿದ್ದಾನೆ. ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದು ಅಕ್ಕನ ಮಕ್ಕಳಿಗೆ ತಿಂಡಿ ಕೊಟ್ಟು ಹೋದಾತ ಮತ್ತೆ ಸ್ನೇಹಿತನಿಗೆ ವಾಯ್ಸ್ ಮೆಸೇಜ್ ಹಾಕಿ ಬೈಕ್ ಇರುವ ಜಾಗ ತಿಳಿಸಿ, ಅದನ್ನು ಕೊಂಡೊಯ್ಯುವಂತೆ ತಿಳಿಸಿದ್ದ. ಆತ ಸೂಚಿಸಿದ್ದ ಸ್ಥಳಕ್ಕೆ ಸ್ನೇಹಿತ ಬಂದು ನೋಡಿದಾಗ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟ ಯುವಕ ಈ ನಿರ್ಧಾರಕ್ಕೆ ತಾನು ಪ್ರೀತಿಸಿದ್ದ ಯುವತಿಯೇ ಕಾರಣ ಎಂದು ಯುವತಿಯ ಹೆಸರು, ಮೊಬೈಲ್ ನಂಬರ್ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!