ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾರ್ಕಳ: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಬಿಜೆಪಿ ಕಾರ್ಯಕರ್ತ ಅಭಯ್‌ಗೆ ಡ್ರಗ್ಸ್ ಪೆಡ್ಲರ್ ಪರಿಚಯ: ಬೆಂಗಳೂರಿನಿಂದ ಡ್ರಗ್ಸ್ ಖರೀದಿಸಿದ್ದ ಆರೋಪಿಗಳು

ಕಾರ್ಕಳ: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಬಿಜೆಪಿ ಕಾರ್ಯಕರ್ತ ಅಭಯ್‌ಗೆ ಡ್ರಗ್ಸ್ ಪೆಡ್ಲರ್ ಪರಿಚಯ: ಬೆಂಗಳೂರಿನಿಂದ ಡ್ರಗ್ಸ್ ಖರೀದಿಸಿದ್ದ ಆರೋಪಿಗಳು

ಕಾರ್ಕಳ: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಸಿಕ್ಕಿರುವುದು ಎಲ್ಲಿಂದ? ಜೊತೆಗೆ ಯುವತಿಗೆ ನೀಡಿದ್ದು ಯಾವ ಡ್ರಗ್ಸ್, ಡ್ರಗ್ಸ್ ಪೆಡ್ಲರ್ ಪರಿಚಯವಾಗಿದ್ದು ಹೇಗೆ ಎಂಬ ಎಲ್ಲಾ ಮಾಹಿತಿಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತ ಅಭಯ್ ಮೂಲಕ ಅಲ್ತಾಫ್‌ಗೆ ಬೆಂಗಳೂರು ಮೂಲದ ಡ್ರಗ್ಸ್ ಮಾರಾಟ ಮಾಡುವ ವ್ಯಕ್ತಿಯೋರ್ವ ಪರಿಚಯವಾಗಿದ್ದ. ಆರೋಪಿ ಅಭಯ್ ತನ್ನ ಜೊತೆ ಅಲ್ತಾಫ್ & ಇತರರನ್ನು ಬೆಂಗಳೂರಿಗೆ ಕರೆದೊಯ್ದು ಡ್ರಗ್ಸ್ ಖರೀದಿಸಿ ಬಳಿಕ ಖರೀದಿಸಿದ್ದ ಡ್ರಗ್ಸ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಉಳಿದ ಡ್ರಗ್ಸ್ ನ್ನು ಅಲ್ತಾಫ್ ಕೃತ್ಯಕ್ಕೆ ಬಳಕೆ ಮಾಡಿದ್ದ. ಯುವತಿಗೆ ನೀಡಿರುವ ಡ್ರಗ್ ಎಂಬ ಬಗ್ಗೆ ಕೂಡ ಮಾಹಿತಿ ಸಿಕ್ಕಿದ್ದು ತನಿಖೆ ಮುಂದುವರೆದಿದೆ.

ಪ್ರಕರಣ ಸಂಬಂಧ  ಇದುವರೆಗೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಕಾರ್ಕಳ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!