ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ಆರ್.ಎಫ್.ಓ ಮೋಹನ್ ಕುಮಾರ್ ಎಸಿಎಫ್ ಆಗಿ ಮುಂಬಡ್ತಿ: ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದ ಆರ್.ಎಫ್.ಓ ಮೋಹನ್ ಕುಮಾರ್

ಬೆಳ್ತಂಗಡಿ : ಆರ್.ಎಫ್.ಓ ಮೋಹನ್ ಕುಮಾರ್ ಎಸಿಎಫ್ ಆಗಿ ಮುಂಬಡ್ತಿ: ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದ ಆರ್.ಎಫ್.ಓ ಮೋಹನ್ ಕುಮಾರ್

ಬೆಳ್ತಂಗಡಿ : ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಆಗಿರುವ ಮೋಹನ್ ಕುಮಾರ್.ಬಿ.ಜಿ ಅವರಿಗೆ ಎಸಿಎಫ್ ಆಗಿ ಆ.7 ರಂದು ಸರಕಾರ ಮುಂಬಡ್ತಿ ನೀಡಿದ್ದು, ಬಾಳೆ ಹೊನ್ನೂರು ಉಪವಿಭಾಗ, ಕೊಪ್ಪ ವಿಭಾಗದ ಎ.ಸಿ.ಎಫ್ ಆಗಿ ವರ್ಗಾವಣೆಗೊಂಡಿದ್ದಾರೆ

ಮೋಹನ್ ಕುಮಾರ್.ಬಿ.ಜಿ 2001 ರಲ್ಲಿ ಡಿ.ಆರ್.ಎಫ್.ಓ ಆಗಿ ಸೇವೆಗೆ ಸೇರಿದ್ದು, 2011 ರಲ್ಲಿ ಆರ್.ಎಫ್.ಓ ಆಗಿ ಮುಂಬಡ್ತಿ ಹೊಂದಿದ್ದು ಇದೀಗ 2024 ರಲ್ಲಿ ಎಸಿಎಫ್ ಅಗಿ ಮುಂಬಡ್ತಿ ಹೊಂದಿದ್ದಾರೆ. ಈ ಮೊದಲು ಮೂಡಿಗೆರೆ, ಪುತ್ತೂರು, ಶಿವಮೊಗ್ಗ, ಕೊಪ್ಪ, ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಕರ್ತವ್ಯದ ವೇಳೆ ಕಾಡು ಪ್ರಾಣಿಗಳ ಬೇಟೆ ಪ್ರಕರಣವನ್ನು ಪತ್ತೆ ಹಚ್ಚಿ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಹಾಗೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಮೆಚ್ಚುಗೆ ಪಡೆದಿದ್ದರು. ಅಲ್ಲದೆ ಹಲವು ಅಕ್ರಮ ಮರ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!