ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನೀರೆಂದು ಭಾವಿಸಿ ಕಚ್ಚಾ ಮದ್ಯ ಸೇವನೆ: ಮೂರು ವರ್ಷದ ಮಗು ಸಾವು..!

ನೀರೆಂದು ಭಾವಿಸಿ ಕಚ್ಚಾ ಮದ್ಯ ಸೇವನೆ: ಮೂರು ವರ್ಷದ ಮಗು ಸಾವು..!

 

ರಾಯಪುರ: ಬಾಯಾರಿ ಬಂದ ಪುಟ್ಟ ಮಗು ನೀರೆಂದು ಭಾವಿಸಿ ಕಚ್ಚಾ ಮದ್ಯ ಸೇವಿಸಿ ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ಬಲರಾಂಪುರದಲ್ಲಿ ನಡೆದಿದೆ.

ಸರಿತಾ ಎಂಬ ಮೂರು ವರ್ಷದ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ನಂತರ ಬಾಯಾರಿಕೆಯಿಂದ ತಕ್ಷಣ ಓಡಿ ಬಂದು ಅಜ್ಜಿಯ ಕೊಠಡಿಯ ಮೇಜಿನ ಮೇಲಿದ್ದ ಬಾಟಲಿಯನ್ನು ತೆಗೆದು ನೀರೆಂದು ಭಾವಿಸಿ ಕುಡಿದ್ದಾಳೆ. ಆದರೆ ಬಾಲಕಿ ಗೊತ್ತಿಲ್ಲದೆ ಮದ್ಯವನ್ನು ಕುಡಿದಿದ್ದಳು. ನೇರವಾಗಿ ಮದ್ಯ ಕುಡಿದ ಪರಿಣಾಮ ಬಾಲಕಿಯ ಗಂಟಲು ಸುಟ್ಟಿದೆ. ತಕ್ಷಣವೇ ತಾಯಿಯ ಬಳಿಗೆ ಓಡಿ ಬಂದ ಬಾಲಕಿ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಳು ಎನ್ನಲಾಗಿದೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮಾರನೆ ದಿನ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!