ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೋಲ್ಕತ್ತಾ: ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿಯ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಮಾಹಿತಿ: “ಆರೋಪಿಗೆ ಪಶ್ಚಾತಾಪವೇ ಇಲ್ಲ: ಕ್ರೂರ ಪ್ರಾಣಿಯ ಸ್ವಭಾವ..!”: ವೈದ್ಯರ ಹೇಳಿಕೆ

ಕೋಲ್ಕತ್ತಾ: ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿಯ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಮಾಹಿತಿ: “ಆರೋಪಿಗೆ ಪಶ್ಚಾತಾಪವೇ ಇಲ್ಲ: ಕ್ರೂರ ಪ್ರಾಣಿಯ ಸ್ವಭಾವ..!”: ವೈದ್ಯರ ಹೇಳಿಕೆ

ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ಸಂಜಯ್ ರಾಯ್‌ನದ್ದು ‘ಕ್ರೂರ ಪ್ರಾಣಿಯ ಮನಸ್ಥಿತಿ’ ಎಂದು ವೈದ್ಯರು ಹೇಳಿದ್ದಾರೆ.

ಆ.18ರಂದು ಸಂಜಯ್ ರಾಯ್ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಿಬಿಐ, ಸಿಎಫ್‌ಎಸ್‌ಎಲ್ ತಜ್ಞರಿಗೆ ಹೇಳಿದ್ದರು. ಈ ಬಳಿಕ ವೈದ್ಯರು ಹೇಳಿರುವ ಮಾಹಿತಿ ಬೆಚ್ಚಿಬೀಳಿಸುವಂತಿದೆ.

“ಆ ವ್ಯಕ್ತಿಗೆ ಯಾವುದೇ ಅಪರಾಧ ಪ್ರಜ್ಞೆ ಇಲ್ಲ, ಅಲ್ಲಿ ಏನಾಗಿದೆ ಎಂಬುದನ್ನು ತಡವರಿಸದೆ ಪ್ರತಿ, ಪ್ರತಿ ನಿಮಿಷದ ಘಟನೆಯನ್ನು ವಿವರಿಸಿದ್ದಾನೆ. ಅವನಿಗೆ ಪಶ್ಚಾತಾಪವಾದಂತೆ ತೋರುತ್ತಿಲ್ಲ. ಆತ ನಿತ್ಯವೂ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿದ್ದ” ಎಂದು ತಿಳಿಸಿದ್ದಾರೆ.

ಕೋಲ್ಕತ್ತಾ  ಹೈಕೋರ್ಟ್ ನಿಂದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು, ಸ್ಥಳೀಯ ಪೊಲೀಸರು ರಾಯ್ ಅವರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.

ಆಸ್ಪತ್ರೆಯಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಆಗಸ್ಟ್ 8 ರಂದು ಬೆಳಗ್ಗೆ 11 ಗಂಟೆಗೆ ಕಾಣಿಸಿಕೊಂಡಿದ್ದ. ಆಗಸ್ಟ್ 8ರ ಮಧ್ಯರಾತ್ರಿ ಆತ ಉತ್ತರ ಕೋಲ್ಕತ್ತಾದಲ್ಲಿರುವ ರೆಡ್ ಲೈಟ್ ಏರಿಯಾಗೆ ಕೂಡ ಹೋಗಿದ್ದ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!