ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಆಟೋ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತ: ರಸ್ತೆಗೆಸೆಯಲ್ಪಟ್ಟ ಚಾಲಕ :ಪವಾಡ ಸದೃಶವಾಗಿ ಪಾರಾದ ಪ್ರಯಾಣಿಕರು

ಆಟೋ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತ: ರಸ್ತೆಗೆಸೆಯಲ್ಪಟ್ಟ ಚಾಲಕ :ಪವಾಡ ಸದೃಶವಾಗಿ ಪಾರಾದ ಪ್ರಯಾಣಿಕರು

ಉಳ್ಳಾಲ: ಆಟೋ ಚಲಾಯಿಸುತ್ತಿದ್ದಾಗಲೇ ಹೃದಯಾಘಾತವಾಗಿ ಆಟೋ ಚಾಲಕ ರಸ್ತೆಗೆಸೆಯಲ್ಪಟ್ಟ ಘಟನೆ ಕೋಟೆಕಾರಿನಲ್ಲಿ ಸಂಭವಿಸಿದೆ.

ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ಎಂಬವರು ಆ.13ರ ಮಧ್ಯಾಹ್ನ ಧರ್ಮನಗರದಿಂದ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು ಮಹಿಳೆಯನ್ನು ಹಾಗೂ ಅವರ ಜೊತೆಗೆ ಇನ್ನೋರ್ವ ಮಹಿಳೆಯನ್ನು ಕ್ಲಿನಿಕ್‌ಗೆ ಬಿಡಲು ಆಟೋದಲ್ಲಿ ಕುಳ್ಳಿರಿಸಿ ಒಂಭತ್ತುಕೆರೆ, ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಚಾಲಕನಿಲ್ಲದ ರಿಕ್ಷಾ ಮುಂದೆ ಚಲಿಸಿದ ಅಲ್ಲೇ ಆಟೋ ಪಾರ್ಕಿನಲ್ಲಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಹೃದಯಾಘಾತಕ್ಕೆ ಒಳಗಾದ ಆಟೋ ಚಾಲಕ ಅಬ್ದುಲ್ ಮಜೀದ್ (44) ಅವರು ಮೃತಪಟ್ಟಿದ್ದು ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!