ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾರವಾರ: ಕೈದಿಗಳಿಬ್ಬರ ಮಧ್ಯೆ ಮಾರಾಮಾರಿ..!: ತಲೆ ಒಡೆದುಕೊಂಡ ಸೆರೆಯಾಳು

ಕಾರವಾರ: ಕೈದಿಗಳಿಬ್ಬರ ಮಧ್ಯೆ ಮಾರಾಮಾರಿ..!: ತಲೆ ಒಡೆದುಕೊಂಡ ಸೆರೆಯಾಳು

ಕಾರವಾರ: ಕೈದಿಗಳಿಬ್ಬರು ರಂಪಾಟ ಮಾಡಿ, ತಲೆ ಒಡೆದುಕೊಂಡಿರುವ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಆ.29ರಂದು ನಡೆದಿದೆ.

ದಾಂಡೇಲಿಯ ಮುಜಾಮಿಲ್ ಹಾಗೂ ಕುಮಟಾದ ಫರಾನ್ ಛಬ್ಬಿ ಎಂಬವರು ಕಲ್ಲಿನಿಂದ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದು ಇಬ್ಬರ ತಲೆಗೆ ಬಟ್ಟೆ ಸುತ್ತಿ, ಕಾರವಾರದ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ, ತಮಗೆ ಜೈಲು ಅಧಿಕಾರಿಗಳು ಮನಬಂದAತೆ ಥಳಿಸಿದ್ದಾರೆ. ಈ ಗಲಾಟೆಗೆ ಜೈಲು ಅಧಿಕಾರಿಗಳೇ ಕಾರಣ ಎಂದು ಆರೋಪ ಮಾಡುತ್ತ ತೆರಳಿದರು. ಆದರೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ಕೈದಿಗಳ ಆರೋಪವು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಜೈಲಿನಲ್ಲಿ ಗಲಾಟೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ, ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ನೀಡಿದ್ದರು. ಜೈಲಿನೊಳಗೆ ಬಹಳಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಸೌಲಭ್ಯವಿಲ್ಲ ಹಾಗೂ ಹೊರಗಿನಿಂದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ. ತಮಗೆ ತಂಬಾಕು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಗಳ ಜೊತೆ ರಗಳೆ ತೆಗೆದಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!