ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರೀಲ್ಸ್ ಹುಚ್ಚು: ರೈಲು ಡಿಕ್ಕಿಯಾಗಿ ತಂದೆ, ತಾಯಿ 3 ವರ್ಷದ ಮಗು ಸಾವು..!: ಮೂವರ ದೇಹ ಛಿದ್ರ, ಛಿದ್ರ..!: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು..?

ರೀಲ್ಸ್ ಹುಚ್ಚು: ರೈಲು ಡಿಕ್ಕಿಯಾಗಿ ತಂದೆ, ತಾಯಿ 3 ವರ್ಷದ ಮಗು ಸಾವು..!: ಮೂವರ ದೇಹ ಛಿದ್ರ, ಛಿದ್ರ..!: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು..?

ಉತ್ತರಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ವಿವ್ಸ್, ಫಾಲೋರ‍್ಸ್ ಗಾಗಿ ಜನ ಎಂತಾ ರಿಸ್ಕ್ ತೆಗೆದುಕೊಳ್ಳೋದಿಕ್ಕೂ ಸಿದ್ಧರಾಗಿದ್ದಾರೆ. ಈಗಾಗ್ಲೆ ಎಷ್ಟೋ ಮಂದಿ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಸೆ.11ರಂದು ಸಂಭವಿಸಿದೆ.

ಲಖೀಂಪುರ ಖೇರಿಯ ಆಯಿಲ್ ರೈಲ್ವೇ ಕ್ರಾಸಿಂಗ್‌ನಲ್ಲಿ ದಂಪತಿ ಅವರ 3 ವರ್ಷದ ಮಗುವಿನ ಜೊತೆ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು ಮೂವರ ದೇಹಗಳು ಛಿದ್ರ ಛಿದ್ರವಾಗಿದೆ. ಮೃತರನ್ನು ಲಾಹರ್‌ಪುರ ಮೊಹಲ್ಲಾ ನಿವಾಸಿಗಳಾದ ಮೊಹಮ್ಮದ್ ಅಹ್ಮದ್ (26), ಪತ್ನಿ ಆಯೇಷಾ (24) ಮತ್ತು 3 ವರ್ಷದ ಮಗ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಒಂದೇ ಕುಟುಂಬದ ಮೂವರು ಬಹಳ ಹೊತ್ತಿನಿಂದ ರೈಲು ಹಳಿಯ ಮೇಲೆ ರೀಲ್ಸ್ ಮಾಡುತ್ತಿದ್ದರು. ರೈಲು ಬರುವುದನ್ನು ಗಮನಿಸದ ಕಾರಣಸೀ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!