ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಾಲಕನ ನಿರ್ಲಕ್ಷ್ಯಕ್ಕೆ 3 ಮಕ್ಕಳು ಸೇರಿದಂತೆ ನಾಲ್ಕು ಸಾವು, ಮಹಿಳೆ ಗಂಭೀರ: ವೇಣೂರಿನ ಒಂದೇ ಕುಟುಂಬವನ್ನು ಬಲಿ ಪಡೆದ ಈಚರ್ ಲಾರಿ :

ಚಾಲಕನ ನಿರ್ಲಕ್ಷ್ಯಕ್ಕೆ 3 ಮಕ್ಕಳು ಸೇರಿದಂತೆ ನಾಲ್ಕು ಸಾವು, ಮಹಿಳೆ ಗಂಭೀರ: ವೇಣೂರಿನ ಒಂದೇ ಕುಟುಂಬವನ್ನು ಬಲಿ ಪಡೆದ ಈಚರ್ ಲಾರಿ :

 

 

 

ಕಾರ್ಕಳ: ಉಡುಪಿ ಬೆಳ್ತಂಗಡಿ ಹೆದ್ದಾರಿಯ ಪಾಜೆಗುಡ್ಡೆ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮುಗ್ದ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಸಂಜೆ ಸುಮಾರು ನಾಲ್ಕು ಗಂಟೆಗೆ ವೇಣೂರಿನಿಂದ ದಂಪತಿ ಸಹಿತ ಮೂರು ಮಕ್ಕಳು ಬೈಕ್ಕಲ್ಲಿ  ಕಾರ್ಯಕ್ರಮ ನಿಮಿತ್ತ ನಲ್ಲೂರಿಗೆ ತೆರಳುತಿದ್ದು ಈ ವೇಳೆ ಬಜಗೋಳಿ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಈಚರ್ ಲಾರಿ ಪಾಜೆಗುಡ್ಡೆ ಎಂಬಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತಿದ್ದ ವೇಣೂರಿನ ಸುರೇಶ್ ಆಚಾರ್ಯ(35) ಮಕ್ಕಳಾದ  ಸುಮೀಕ್ಷಾ (7) ಸುಶಾಂತ್ (2) ಸ್ಥಳದಲ್ಲೇ ಸಾವನ್ನಪ್ಪಿದ್ದು. ಗಂಭೀರ ಗಾಯಗೊಂಡ ಸುಶ್ಮಿತಾ(5) ಹಾಗೂ ಮೀನಾಕ್ಷಿ (32) ಅವರನ್ನು ಕಾರ್ಕಳದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅದರೆ ಅಲ್ಲಿ ಸುಶ್ಮಿತಾ ಸಾವನ್ನಪ್ಪಿದ್ದಾರೆ. ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದೆ.ಆರೋಪಿ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!