ಬಾಲಕಿಯನ್ನು ಹತ್ಯೆ ಮಾಡಿ ಬಳಿಕ ಶವವನ್ನು ಶಾಲಾ ಆವರಣದೊಳಗೆ ಎಸೆದಿದ್ದ. ಆಕೆಯ ಬ್ಯಾಗ್, ಶೂಗಳು ಕ್ಲಾಸ್ ರೂಂ ಸಮೀಪ ಪತ್ತೆಯಾಗಿದ್ದು, ಆರೋಪಿ ಪ್ರಾಂಶುಪಾಲ ಗೋವಿಂದ್ ನಾಥ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ರಾಜ್ ದೀಪ್ ಸಿಂಗ್ ಝಾಲಾ ಪ್ರತಿಕ್ರಿಯೆ ನೀಡಿ, “ಆರು ವರ್ಷದ ವಿದ್ಯಾರ್ಥಿನಿಯ ಶವ ಶಾಲಾ ಆವರಣದೊಳಗೆ ಮಂಗಳವಾರ (23) ಸಂಜೆ ಪತ್ತೆಯಾಗಿದ್ದು, ಘಟನೆ ನಂತರ ಪ್ರದೇಶದಲ್ಲಿ ಜನರು ಭಯಭೀತಿಗೊಳಗಾಗಿದ್ದರು. ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಪೋಸ್ಟ್ ಮಾರ್ಟ್ ಮ್ ವರದಿಯಲ್ಲಿ ಬಹಿರಂಗವಾಗಿತ್ತು. ತನಿಖೆಗಾಗಿ ಹತ್ತು ತಂಡವನ್ನು ರಚಿಸಿದ್ದು, ಮಗು ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಾಥ್ ಜೊತೆ ಶಾಲೆಗೆ ಹೋಗುತ್ತಿತ್ತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಳು ಎಂದಿದ್ದಾರೆ.