ದಕ್ಷಿಣ ಅಲಬಾಮಾ ಜೈಲಿನಲ್ಲಿದ್ದ 59 ವರ್ಷದ ಅಪರಾಧಿ ಅಲನ್ ಯುಜೀನ್ ಮಿಲ್ಲರ್ ಎಂಬಾತ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮೂವರನ್ನು ಹತ್ಯೆಗೈದಿದ್ದ. ಇದಕ್ಕಾಗಿ ಈತನಿಗೆ ನೈಟ್ರೋಜನ್ ಗ್ಯಾಸ್ ಮೂಲಕ ಗುರುವಾರ ಮರಣಶಿಕ್ಷೆ ವಿಧಿಸಲಾಗಿದೆ.
ಅಲನ್ ಯುಜೀನ್ ಮಿಲ್ಲರ್ ಮುಖಕ್ಕೆ ಅಧಿಕಾರಿಗಳು ಮುಖವಾಡ ಹಾಕಿ ಸಾರಜನಕ ಅನಿಲ ಕಳುಹಿಸಲು ಪ್ರಾರಂಭಿಸಿದರು. ವಿಷಾನಿಲ ಸೇವಿಸಿದ ಆತ ಎರಡೇ ನಿಮಿಷದಲ್ಲಿ ಕೆಳಗೆ ಬಿದ್ದಿದ್ದು, ಮುಂದಿನ ಆರು ನಿಮಿಷದಲ್ಲಿ ಸಾವನ್ನಪ್ಪಿದ್ದಾನೆ. ಇದರೊಂದಿಗೆ 8 ನಿಮಿಷಗಳಲ್ಲಿ ಮರಣದಂಡನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಷಾನಿಲ ಸೇವಿಸಿದ ಆತ ಎರಡೇ ನಿಮಿಷದಲ್ಲಿ ಕೆಳಗೆ ಬಿದ್ದಿದ್ದು, ಮುಂದಿನ ಆರು ನಿಮಿಷದಲ್ಲಿ ಸಾವನ್ನಪ್ಪಿದ್ದಾನೆ. ಇದರೊಂದಿಗೆ 8 ನಿಮಿಷಗಳಲ್ಲಿ ಮರಣದಂಡನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.