ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ: ವೇಷಧಾರಿಯ ವಿರುದ್ಧ ಜೈ ತುಳುನಾಡು ಸಂಘಟನೆ ದೂರು

ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ: ವೇಷಧಾರಿಯ ವಿರುದ್ಧ ಜೈ ತುಳುನಾಡು ಸಂಘಟನೆ ದೂರು

ಬೆಂಗಳೂರು: ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಜೈ ತುಳುನಾಡು ಸಂಘಟನೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಪಂಜುರ್ಲಿ ದೈವದ ನರ್ತನೆಯ ಕಟ್ಟುಪಾಡು ಅರಿಯದೇ ನೃತ್ಯ ಮಾಡುವಂತಿಲ್ಲ. ಆದರೆ ಗಣೇಶ ಹಬ್ಬದ ವೇಳೆ ದೇವರ ಮುಂದೆ ಮತ್ತಿಕೆರೆ ಯಲ್ಲಮ್ಮ ದೇವಸ್ಥಾನ ಅರ್ಚಕರಾದ ವೆಂಕಟೇಶ್ ಅವರು ದೈವದ ವೇಷ ಧರಿಸಿ ಅಸಭ್ಯವಾಗಿ ನೃತ್ಯ ಮಾಡಿದ್ದಾರೆ. ಈ ಮೂಲಕ ಕರಾವಳಿ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸಂಘಟನೆಯು ಆಗ್ರಹಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!