ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸವಣಾಲು, ಬೋನಿನೊಳಗೆ ಸೆರೆ ಸಿಕ್ಕ ಮತ್ತೊಂದು ಚಿರತೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ:

ಸವಣಾಲು, ಬೋನಿನೊಳಗೆ ಸೆರೆ ಸಿಕ್ಕ ಮತ್ತೊಂದು ಚಿರತೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ:

 

 

 

ಬೆಳ್ತಂಗಡಿ: ಸವಣಾಲು ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಅರಣ್ಯ ಇಲಾಖೆ ಇರಿಸಿದ್ದ  ಬೋನಿಗೆ   ಮತ್ತೊಂದು ಚಿರತೆ  ಬಿದ್ದಿದೆ. ಸವಣಾಲು ಗ್ರಾಮದ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆ ಬಳಿ ಇರಿಸಲಾಗಿದ್ದ ಬೋನಿನೊಳಗೆ ಕಳೆದ ಮಧ್ಯರಾತ್ರಿ ಚಿರತೆ ಸೆರೆಯಾಗಿದೆ. ಕಳೆದ ಕೆಲವು ತಿಂಗಳುಳಿಂದ  ಗುರಿಕಂಡ ಪರಿಸರದಲ್ಲಿ ಚಿರತೆ ಹಾವಳಿಯಿಂದ ಕೋಳಿ ಸೇರಿದಂತೆ ಸಾಕು ಪ್ರ್ರಾಣಿಗಳಿಗೆ ತೊಂದರೆಯಾಗುತ್ತಿರುವ   ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಚಿರತೆಯನ್ನು ಸೆರೆ ಹಿಡಿಯುವುದಕ್ಕಾಗಿ ಬೋನ್ ಆಳವಡಿಸಿದ್ದರು. ಸುಮಾರು 3 ತಿಂಗಳ ನಂತರ ಸೆಪ್ಟೆಂಬರ್ 1 ರ ಮಧ್ಯರಾತ್ರಿ  ಚಿರತೆ ಈ ಬೋನಿನೊಳಗೆ ಸೆರೆಯಾಗಿತ್ತು. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು. ಅದರೆ ಒಂದೇ ವಾರದೊಳಗೆ ಮತ್ತೊಂದು ಚಿರತೆ  ಈ ಪರಿಸರದಲ್ಲಿ ಸುತ್ತಾಡಿದ್ದಲ್ಲದೇ ಮನೆಯ ಕೋಳಿಯನ್ನು ಹಿಡಿದಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಮನವಿ‌ ಮಾಡಿಕೊಂಡಿದ್ದರು. ಅದರಂತೆ ಮತ್ತೆ ಕಳೆದ ಒಂದು ವಾರಗಳ ಹಿಂದೆ  ಬೋನ್ ಅಳವಡಿಸಲಾಗಿತ್ತು.  ಸೆ 20ರ ಶುಕ್ರವಾರ  ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಬೋನಿನೊಳಗೆ ಚಿರತೆ ಸೆರೆಯಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದು ಅಧಿಕಾರಿಗಳ ಬಂದು ಪರಿಶೀಲನೆ ನಡೆಸಿದ್ದಾರೆ.ಒಂದು ತಿಂಗಳಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಂತಾಗಿದೆ. ಇದನ್ನೂ ಓದಿ:

https://prajaprakasha.com/?p=30444

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!