ರೈತರ ಜಮೀನಿನಲ್ಲಿ ಅಡಗಿದ್ದ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹೋಗಿದ್ದ ವೇಳೆ ಗ್ರಾಮಸ್ಥರು ಕೂಡ ತೆರಳಿದ್ದರು. ಈ ವೇಳೆ ಚಿರತೆ ಅರಣ್ಯ ಸಿಬ್ಬಂದಿ ಮೇಲೆ ಮಾಡಲು ಯತ್ನಿಸಿದೆ. ಕೂಡಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆದರೆ ಈ ಗುಂಡು ತಗುಲಿ ನಾಲ್ವರು ಗಾಯಗೊಂಡಿದ್ದಾರೆ. ಇದೇ ವೇಳೆ ಗಾಯವಾಗಿದ್ದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗೆ ದೊಣ್ಣೆಯಿಂದಲೂ ಹೊಡೆದಾಗ ಚಿರತೆ ಸತ್ತಿರುವ ಶಂಕೆ ವ್ಯಕ್ತವಾಗಿದೆ.