ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನೇತಾಡುತಿದ್ದ ಅಪಾಯಕಾರಿ ಹೈಮಾಸ್ಟ್ ಲೈಟ್ ತೆರವು: "ಪ್ರಜಾಪ್ರಕಾಶ ನ್ಯೂಸ್" ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್:

ನೇತಾಡುತಿದ್ದ ಅಪಾಯಕಾರಿ ಹೈಮಾಸ್ಟ್ ಲೈಟ್ ತೆರವು: "ಪ್ರಜಾಪ್ರಕಾಶ ನ್ಯೂಸ್" ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್:

 

 

ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿ ಹೈಮಾಸ್ಟ್ ಲೈಟ್ ನೇತಾಡುವ ಸ್ಥಿತಿಯಲ್ಲಿರುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವರದಿ ಪ್ರಕಟಿಸಿದ್ದು. ವರದಿ ಪ್ರಕಟವಾದ ಕೆಲವೇ ತಾಸುಗಳಲ್ಲಿ   ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಪಂದಿಸಿ ಹೈಮಾಸ್ಟ್ ಲೈಟ್ ತೆರವುಗೊಳಿಸಿದೆ.

 

 

 

 

ಕಳೆದ ಕೆಲವು ದಿನಗಳಿಂದ ಮೂರು ಮಾರ್ಗದ ಬಳಿಯ ಮುಖ್ಯ ರಸ್ತೆಯ ಬದಿಯಲ್ಲಿರುವ ಹೈಮಾಸ್ಟ್ ಲೈಟ್ ನ ಒಂದು ಬದಿಯ ಸ್ಟೇ ಕೇಬಲ್ ತುಂಡಾಗಿ ನೇತಾಡಿಕೊಂಡು ಬೀಳುವ ರೀತಿಯಲ್ಲಿ ಕಾಣುತ್ತಿರುವ ಅಪಾಯದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ತೃತ ವರದಿಯನ್ನು ಗುರುವಾರ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ  ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ತಕ್ಷಣ ಕಾರ್ಯಪೃವೃತ್ತರಾಗಿ  ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಹೈಮಾಸ್ಟ್ ಲೈಟ್ ತೆರವುಗೊಳಿಸಲಾಗಿದೆ. ಕೆಲವೇ ದಿನಗಳಲ್ಲಿ   ಹೊಸ ಲೈಟ್ ಅಳವಡಿಸಲಾಗುವುದು ಎಂದು  ಅಧ್ಯಕ್ಷರಾದ ಜಯಾನಂದ ಗೌಡ ಅವರು ಪ್ರಜಾ ಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ:

 

http://prajaprakasha.com/?p=30418

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!