ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಆರೋಪಿ ನಟ ದರ್ಶನ್ ಭೇಟಿಯಾದ ತಾಯಿ ಮೀನಾ, ಅಕ್ಕ-ಬಾವ: ಮೊದಲ ಬಾರಿಗೆ ಬಳ್ಳಾರಿ ಜೈಲಿನಲ್ಲಿ ತಾಯಿ-ಮಗ ಭೇಟಿ

ಆರೋಪಿ ನಟ ದರ್ಶನ್ ಭೇಟಿಯಾದ ತಾಯಿ ಮೀನಾ, ಅಕ್ಕ-ಬಾವ: ಮೊದಲ ಬಾರಿಗೆ ಬಳ್ಳಾರಿ ಜೈಲಿನಲ್ಲಿ ತಾಯಿ-ಮಗ ಭೇಟಿ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ನಟ ಆರೋಪಿ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ ಇಂದು ಭೇಟಿಯಾಗಿದ್ದಾರೆ.

ಹೈಸೆಕ್ಯೂರಿಟಿ ಸೆಲ್ ವಿಸಿಟಿಂಗ್ ರೂಮ್‌ನಲ್ಲಿ ದರ್ಶನ್ ಅವರು ತಾಯಿ ಮೀನಾ, ದಿವ್ಯ ಜತೆಗೆ ದರ್ಶನ್ ಬಾವ ಮಂಜುನಾಥ, ಅಕ್ಕನ ಮಕ್ಕಳು ರವಿಚಂದ್ರ, ಇಂದ್ರಕುಮಾರ್ ಸೇರಿ 5ಜನ ಕುಟುಂಬಸ್ಥರು ಭೇಟಿಯಾದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್ ಜೊತೆ ಅವರು ಮಾತುಕತೆ ನಡೆಸಿ ಬಳಿಕ ದರ್ಶನ್ ಗಾಗಿ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ನೀಡಲಾಯಿತು.

ಆರೋಪಿ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದ ನಂತರ ಇಂದೇ ಅವರ ತಾಯಿ ಮೀನಾ ತೂಗುದೀಪ ಅವರು ಮಗನನ್ನು ಭೇಟಿ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!