ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಚೂರಿ ಇರಿದ ಯುವಕ: ಆರೋಪಿಗೆ ಪೊಲೀಸರಿಂದ ಗುಂಡೇಟು..!

ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಚೂರಿ ಇರಿದ ಯುವಕ: ಆರೋಪಿಗೆ ಪೊಲೀಸರಿಂದ ಗುಂಡೇಟು..!

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಯುವಕನೋರ್ವ ಚೂರಿಯಿಂದ ಇರಿದ ಘಟನೆ ನಡೆದಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ನೀಲಾ ಎಂಬ ಮಹಿಳೆಯ ಮಗಳನ್ನು ಆರೋಪಿ ಮಹೇಶ್ (24) ಎಂಬಾತ ತನ್ನನ್ನು ಮದುವೆಯಾಗು, ಪ್ರೀತಿಸು ಎಂದು ಕಳೆದ 5 ವರ್ಷಗಳಿಂದ ಬಲವಂತ ಮಾಡುತ್ತಿದ್ದ. ಸೆ.25ರಂದು ಲೋಹಿಯಾನಗರದ ನಿವಾಸಕ್ಕೆ ಬಂದು ಮತ್ತೆ ಮನೆಯವರೆದುರು ಜಗಳ ಮಾಡಿದ್ದಾನೆ. ಈ ವೇಳೆ ಯುವತಿಯ ತಾಯಿ ನೀಲಾ ಅವರಿಗೆ ಚಾಕುವಿನಿಂದ ಇರಿದಿದ್ದಲ್ಲದೆ ಮನೆಯಲ್ಲಿದ್ದ ಇತರ ಸದಸ್ಯರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.

ಅಲ್ಲಿಂದ ಪರಾರಿಯಾಗಿದ್ದ ಆರೋಪಿಯನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!