Home › 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿದ ತಂದೆ..!: ತಲೆಕೆಳಗಾಗಿ ನೇತಾಡುತ್ತಿದ್ದವಳಿಗೆ ಮನ ಬಂದಂತೆ ಥಳಿತ..!: ವಿಚಾರಣೆಯಲ್ಲಿ ತಂದೆ ಹೇಳಿದ ಕಾರಣವೇನು ಗೊತ್ತಾ..?
10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿದ ತಂದೆ..!: ತಲೆಕೆಳಗಾಗಿ ನೇತಾಡುತ್ತಿದ್ದವಳಿಗೆ ಮನ ಬಂದಂತೆ ಥಳಿತ..!: ವಿಚಾರಣೆಯಲ್ಲಿ ತಂದೆ ಹೇಳಿದ ಕಾರಣವೇನು ಗೊತ್ತಾ..?
ONLINE PUDU / Saturday, October 12, 2024
ಉತ್ತರಪ್ರದೇಶ: ತಂದೆಯೊಬ್ಬ ತನ್ನ ಹತ್ತು ವರ್ಷದ ಮಗಳನ್ನು ಹಗ್ಗದಿಂದ ಬಿಗಿದು ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಗೋವಿಂದ್ ರೈ ರೈಕ್ವಾರ್ ಎಂಬಾತ ತನ್ನ ಮನೆಯಲ್ಲಿ ಮಗಳನ್ನು ಹಗ್ಗದಿಂದ ಬಿಗಿದು ನೇತು ಹಾಕಿ ಥಳಿಸಿದ್ದಾನೆ. ಇದನ್ನು ನೆರೆಮನೆಯವರು ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ಸತ್ಯಂಶ ಹೊರ ಬಿದ್ದಿದೆ.
“ತನ್ನ ಮಗಳು ನಾನು ಹೇಳಿದಂತೆ ಕೇಳುತ್ತಿಲ್ಲ, ನನ್ನ ಮಾತು ಕೇಳದಕ್ಕೆ ಸಿಟ್ಟಿಗೆದ್ದು ಆಕೆಯನ್ನು ಥಳಿಸಿರುವುದಾಗಿ” ಆರೋಪಿ ಗೋವಿಂದ್ ರೈ ರೈಕ್ವಾರ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.