ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಂಗಳೂರು: ಆನ್‌ಲೈನ್ ವಂಚನೆ: 43.32 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!

ಮಂಗಳೂರು: ಆನ್‌ಲೈನ್ ವಂಚನೆ: 43.32 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!

ಸಾಂದರ್ಭಿಕ ಚಿತ್ರ

ಮಂಗಳೂರು: ಷೇರು ಮತ್ತು ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ವಹಿವಾಟಿನಲ್ಲಿ ಹೆಚ್ಚಿನ ಲಾಭ ಒದಗಿಸುವು ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 43.32 ಲಕ್ಷ ರೂ ವಂಚನೆಗೆ ಮಾಡಿರುವ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸೆ. 25ರಂದು ಅಪರಿಚಿತ ಸಂಖ್ಯೆಯಿಂದ ದೂರುದಾರರ ವಾಟ್ಸ್ಆ್ಯಪ್‌ಗೆ ಸಂದೇಶ ಬಂದಿದ್ದು, ಷೇರು ಮತ್ತು ಐಪಿಒ ವಹಿವಾಟಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಒಂದು ಆನ್‌ಲೈನ್ ಕೊಂಡಿಯನ್ನು ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದ. ಜೊತೆಗೆ ಇನ್ನೊಂದು ಕೊಂಡಿಯನ್ನು ಕಳುಹಿಸಿದ್ದ. ಈ ಬಗ್ಗೆ ಸಲಹೆ ನೀಡಲು ಟೆಲಿಗ್ರಾಂ ಆ್ಯಪ್‌ನ ಕೊಂಡಿ ಕಳುಹಿಸಿದ್ದರು.

ದೂರುದಾರರು ಸೆ 26ರಿಂದ ಅ. 23ರ ನಡುವೆ ಒಮ್ಮೆ ₹ 22 ಲಕ್ಷ, ಮತ್ತೊಮ್ಮೆ ₹ 19.82 ಲಕ್ಷ, ಇನ್ನೊಮ್ಮೆ ₹ 1.5 ಲಕ್ಷ ಸೇರಿ ಒಟ್ಟು ₹ 43.32 ಹಣ ಪಾವತಿಸಿದ್ದರು. ಆದರೆ ಬಳಿಕ ಹೂಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಸಲಹೆ ನೀಡಿದ ವ್ಯಕ್ತಿಗಳು ಶೇ 25ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಂಚನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವ್ಯಕ್ತಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!