ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿ..!: ಓರ್ವ ಪ್ರಯಾಣಿಕ ಸಜೀವ ದಹನ..!: 6 ಜನರಿಗೆ ಗಾಯ

ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿ..!: ಓರ್ವ ಪ್ರಯಾಣಿಕ ಸಜೀವ ದಹನ..!: 6 ಜನರಿಗೆ ಗಾಯ

ಬೆಳಗಾವಿ: ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿಯಾದ ಘಟನೆ ಕೊಲ್ಹಾಪುರದಲ್ಲಿ ಅ.25ರ ಮಧ್ಯರಾತ್ರಿ ಸಂಭವಿಸಿದೆ.

ಬೆಳಗಾವಿಯಿAದ ಪುಣೆಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ಗೆ ಬೆಂಕಿ ತಗುಲಿದ್ದು ಪರಿಣಾಮ ಓರ್ವ ಪ್ರಯಾಣಿಕ ಸಜೀವ ದಹನವಾಗಿ, 6 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಖಾಸಗಿ ಕಂಪನಿಯ ಬಸ್ ರಾತ್ರಿ 9 ಗಂಟೆ ಸುಮಾರಿಗೆ 30 ಪ್ರಯಾಣಿಕರೊಂದಿಗೆ ಬೆಳಗಾವಿಯಿಂದ ಪುಣೆಗೆ ಹೊರಡಿದೆ. ಬಸ್ ಗೋಕುಲ್ ಶಿರಗಾಂವ್‌ನ ಮಯೂರ್ ಪೆಟ್ರೋಲ್ ಪಂಪ್ ಬಳಿ ಬಂದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಕಂಡ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದು, ಕೆಲ ಪ್ರಯಾಣಿಕರು ಗಾಬರಿಯಿಂದ ಬಸ್‌ನಿಂದ ಕೆಳಗಿಳಿದರು. ಆದರೆ, ಒಬ್ಬ ಪ್ರಯಾಣಿಕ ಮಲಗಿದ್ದ ಕಾರಣ ಒಳಗೆ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವೇ ನಿಮಿಷಗಳಲ್ಲಿ ಬಸ್ ಬೆಂಕಿಗೆ ಆಹುತಿಯಾಗಿದೆ.

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!