ಸಿಸಿಬಿ ಪೊಲೀಸರು ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನೈಜೀರಿಯಾ ಪ್ರಜೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ನೈಜೀರಿಯಾ ಪ್ರಜೆಯ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಆತ ಬೆಂಗಳೂರಿನಲ್ಲಿ ವಾಸವಿರುವುದನ್ನು ಪತ್ತೆ ಮಾಡಿದ್ದಾರೆ. ಕೂಡಲೆ ಕಾರ್ಯಪ್ರವೃತರಾದ ಪೊಲೀಸರು ಬೆಂಗಳೂರಿಗೆ ತೆರಳಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ಈತ ರಾಜ್ಯದ ವಿವಿಧಡೆ ಡ್ರಗ್ ಪೂರೈಕೆ ಮಾಡುತ್ತಿದ್ದ. ಚಿಪ್ಸ್, ಬಿಸ್ಕೆಟ್ ಮತ್ತು ಗುಟ್ಕಾ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಹಾಕಿ, ಬಳಿಕ ಈ ಪ್ಯಾಕೆಟ್‌ಗಳನ್ನು ಕಸ ಎಸೆಯುವ ಜಾಗದಲ್ಲಿ ಎಸೆಯುತ್ತಿದ್ದನು. ಬಳಿಕ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಕಳುಹಿಸುತ್ತಿದ್ದನು. ಅವರು ಅಲ್ಲಿಂದ ಪ್ಯಾಕೆಟ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು.
ಕಾರ್ಯಾಚರಣೆ ವೇಳೆ ಮಂಗಳೂರು ನಗರದಲ್ಲಿದ್ದ 50ಕ್ಕೂ ಅಧಿಕ ಡ್ರಗ್ಸ್ ಪ್ಯಾಕೆಟ್‌ಗಳನ್ನು, ನೈಜೀರಿಯಾ ಪ್ರಜೆ ಬಳಿ ಇದ್ದ 17 ಸಿಮ್ ಕಾರ್ಡ್, ಆತನ ಪಾಸ್‌ಪೋರ್ಟ್ ಸಹಿತ ಎಲ್ಲ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.