Home › ಉಜಿರೆ: ರಸ್ತೆ ಡಿವೈಡರ್ ಗೆ ಖಾಸಗಿ ಬಸ್ ಡಿಕ್ಕಿ: ಬೀದಿ ದೀಪದ ಕಂಬಗಳಿಗೆ ಹಾನಿ..!
ಉಜಿರೆ: ರಸ್ತೆ ಡಿವೈಡರ್ ಗೆ ಖಾಸಗಿ ಬಸ್ ಡಿಕ್ಕಿ: ಬೀದಿ ದೀಪದ ಕಂಬಗಳಿಗೆ ಹಾನಿ..!
ONLINE PUDU / Saturday, October 05, 2024
ಬೆಳ್ತಂಗಡಿ: ಉಜಿರೆಯಲ್ಲಿ ಖಾಸಗಿ ಬಸ್ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಉಜಿರೆ ಕಡೆಯಿಂದ ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುತಿದ್ದ ಖಾಸಗಿ ಬಸ್ ಉಜಿರೆ ಓಶ್ಯನ್ ಪರ್ಲ್ ಹೋಟೇಲ್ ಬಳಿ ರಸ್ತೆ ಬದಿಯ ಡಿವೈಡರ್ ಗೆ ಹಾಗೂ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೀದಿ ದೀಪದ ಕಂಬಗಳಿಗೆ ಹಾನಿಯಾಗಿದೆ. ಬಸ್ ನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.