ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಿಯರ್‌ಗಾಗಿ ಮೂರು ತಿಂಗಳ ಹಸುಗೂಸನ್ನೇ ಮಾರಿದ ಪೋಷಕರು..!

ಬಿಯರ್‌ಗಾಗಿ ಮೂರು ತಿಂಗಳ ಹಸುಗೂಸನ್ನೇ ಮಾರಿದ ಪೋಷಕರು..!

ವಾಷಿಂಗ್ಟನ್: ಬಿಯರ್‌ಗಾಗಿ ದಂಪತಿ ತಮ್ಮ ಮೂರು ತಿಂಗಳ ಹಸುಗೂಸನ್ನೇ ಮಾರಾಟ ಮಾಡಿರುವ ಘಟನೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದಿದೆ.

ಸೆ. 21 ರಂದು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ ಗಾಗಿ ಹಸುಗೂಸನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್‌ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದಂಪತಿಗಳಿದ್ದ ಟೆಂಟ್ ನಲ್ಲಿ ಸಾವಿರ ಡಾಲರ್‌ಗಳಿಗೆ ಮಾರಾಟ ಮಾಡಲು ಒಪ್ಪಿದ ಪತ್ರ ಪತ್ತೆಯಾಗಿದ್ದು ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!