ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ವೃದ್ಧೆಯ ಮನವೊಲಿಸಿ ಪ್ರಾಣ ಉಳಿಸಿದ ಪೊಲೀಸರು

ಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ವೃದ್ಧೆಯ ಮನವೊಲಿಸಿ ಪ್ರಾಣ ಉಳಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ಪೊಲೀಸರು ರಕ್ಷಿಸಿದ್ದಾರೆ.

ಭದ್ರಾವತಿಯ ಹೊಸ ಸೇತುವೆ ಬಳಿ ವೃದ್ಧೆ ನದಿಗೆ ಬಿದ್ದು ಸಾಯಲು ಯತ್ನಿಸುತ್ತಿದ್ದಾರೆ ಎಂದು  ERSS-122 ಗೆ ದೂರವಾಣಿ ಕರೆ ಬಂದಿತ್ತು. ತಕ್ಷಣ ERSS-122 ಸಿಬ್ಬಂದಿ ಸೇತುವೆ ಬಳಿ ಹೋಗಿ ನೋಡಿದಾಗ ವೃದ್ಧೆ ಮುಳುಗುತ್ತಿದ್ದರು. ಬಳಿಕ ಪೊಲೀಸರು, ಸಾರ್ವಜನಿಕರ ಸಹಾಯದಿಂದ ವೃದ್ಧೆಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ವೃದ್ಧೆಯ ಮನವೊಲಿಸಿ ಭದ್ರಾವತಿ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಲಾಗಿದ್ದು, ಯಾವ ಕಾರಣಕ್ಕೆ ನದಿಗೆ ಬಿದ್ದು ಸಾಯಲು ಯತ್ನಿಸುತ್ತಿದ್ದೀರಿ ಎಂದು ವಿಚಾರಿಸಿದಾಗ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಸಾಯುವ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಆ ಬಳಿಕ ಸಂಬAಧಿಕರನ್ನು ಕರೆಸಿ ಮನೆಗೆ ವಾಪಾಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!