ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹವನ್ನು ಸೋಮವಾರ ಬೆಳಗ್ಗೆ 8.30ಕ್ಕೆ ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಆದರೆ ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಸೋಮವಾರ ಬೆಳಗ್ಗೆ ಬೆಂಗ್ರೆಯಿAದ ಮುಳುಗು ತಜ್ಞರು ಆಗಮಿಸಿ ಶೋಧ ಆರಂಭಿಸಿದ್ದರು. ಅವರ ಜತೆಯಲ್ಲಿ ಅಗ್ನಿಶಾಮಕ ದಳವೂ ಕಾರ್ಯಾಚರಣೆ ನಡೆಸಿದೆ.
ಬಜಪೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್. ಹಾಗೂ ಸಿಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.