ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಂಬವರು ನಿನ್ನೆ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ಹೋಗಿದ್ದರು ಎನ್ನಲಾಗಿದೆ. ಬಳಿಕ ನದಿಯಲ್ಲಿ ಸಂಜೆಯ ವೇಳೆ ನಾಪತ್ತೆಯಾಗಿದ್ದರು.
ಈತನಿಗಾಗಿ ಸ್ಥಳೀಯರ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗಿದ್ದು, ಬಳಿಕ ಮೃತದೇಹ ಪತ್ತೆಯಾಗಿದೆ.
ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.