ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸೈಡ್ ಕೊಡುವ ವೇಳೆ ಇನ್ನೊಂದು ಕಾರಿಗೆ ತಾಗಿದ ಕಾರು: ರಸ್ತೆಯಲ್ಲೇ ವಾಗ್ವಾದಕ್ಕಿಳಿದ ಮಹಿಳೆಯರು, ಪುರುಷರು:ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಘಟನೆ:

ಸೈಡ್ ಕೊಡುವ ವೇಳೆ ಇನ್ನೊಂದು ಕಾರಿಗೆ ತಾಗಿದ ಕಾರು: ರಸ್ತೆಯಲ್ಲೇ ವಾಗ್ವಾದಕ್ಕಿಳಿದ ಮಹಿಳೆಯರು, ಪುರುಷರು:ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಘಟನೆ:

 

 

ಬೆಳ್ತಂಗಡಿ: ಸೈಡ್ ಕೊಡುವ ವೇಳೆ ಕಾರಿಗೆ ತಾಗಿದೆ ಎಂದು ಎರಡು ಕಾರಿನ   ಪ್ರಯಾಣಿಕರು ವಾಗ್ವಾದಕ್ಕಿಳಿದ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ  ಯಾತ್ರಾರ್ಥಿಗಳು ಹಿಂದಿರುಗುವ ವೇಳೆ ಕಾರೊಂದಕ್ಕೆ ಸೈಡ್ ಕೊಡುವ ವೇಳೆ ತಾಗಿದೆ ಎಂಬ  ವಿಚಾರವಾಗಿ   ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಶಾಸಕರ ಕಛೇರಿ ಎದುರು ಕಾರನ್ನು ನಿಲ್ಲಿಸಿ  ವಾಗ್ವಾದಕ್ಕಿಳಿದಿದ್ದಾರೆ. ಕಾರಿನಲ್ಲಿದ್ದ ಮಹಿಳೆಯರು ಪುರುಷರು ಇತ್ತಂಡಗಳಾಗಿ ಗಲಾಟೆ ಮಾಡಿಕೊಂಡಿದ್ದು, ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಂತರ ಸ್ಥಳೀಯರು ಎರಡು ಕಾರಿನವರನ್ನು ಸಮಾಧಾನ ಪಡಿಸಿ ಕಳುಹಿಸಿಕೊಟ್ಟು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!