ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ : ಕಿರಿಯ ಶ್ರೇಣಿ ನ್ಯಾಯಾಲಯಗಳ ಹೆಚ್ಚುವರಿ ಹೊಣೆ ವಹಿಸಿ ಸರಕಾರ ಆದೇಶ

ಬೆಳ್ತಂಗಡಿ : ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ : ಕಿರಿಯ ಶ್ರೇಣಿ ನ್ಯಾಯಾಲಯಗಳ ಹೆಚ್ಚುವರಿ ಹೊಣೆ ವಹಿಸಿ ಸರಕಾರ ಆದೇಶ

ಬೆಳ್ತಂಗಡಿ: ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ನಿಯುಕ್ತರಾಗಿದ್ದ ಮನೋಹರ ಕುಮಾರ್, ಎ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ ಮತ್ತು ಹೆಚ್ಚವರಿ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಹೆಚ್ಚುವರಿ ಹೊಣೆ ವಹಿಸಿಕೊಳ್ಳುವಂತೆ ಸರಕಾರ ಆದೇಶಿಸಿದೆ.

ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಯು. ಟಿ ಖಾದರ್ ರವರ ಸೂಚನೆ ಮೇರೆಗೆ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ (ಆಡಳಿತ -2) ಅದೀನ ಕಾರ್ಯದರ್ಶಿಗಳಾದ ಆದಿನಾರಾಯಣರವರು ಈ ಆದೇಶ ನೀಡಿರುತ್ತಾರೆ.

ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರ ಶಿಫಾರಸ್ಸಿನ ಮೇರೆಗೆ ಈ ಹೆಚ್ಚುವರಿ ಹೊಣೆ ವಹಿಸುವಂತೆ ವಿಧಾನ ಸಭಾಧ್ಯಕ್ಷರು ಸೂಚನೆ ನೀಡಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!