Home › ರಸ್ತೆ ದಾಟುತ್ತಿದ್ದ ಆನೆ ಮರಿಗೆ ಬೃಹತ್ ವಾಹನ ಡಿಕ್ಕಿ..!: ಸ್ಥಳದಲ್ಲೆ ಉಸಿರು ಚೆಲ್ಲಿದ ಮರಿಆನೆ..!
ರಸ್ತೆ ದಾಟುತ್ತಿದ್ದ ಆನೆ ಮರಿಗೆ ಬೃಹತ್ ವಾಹನ ಡಿಕ್ಕಿ..!: ಸ್ಥಳದಲ್ಲೆ ಉಸಿರು ಚೆಲ್ಲಿದ ಮರಿಆನೆ..!
ONLINE PUDU / Tuesday, October 29, 2024

ಆನೇಕಲ್ : ರಸ್ತೆ ದಾಟುತ್ತಿದ್ದ ಆನೆ ಮರಿಗೆ ಬೃಹತ್ ವಾಹನ ಡಿಕ್ಕಿಯಾಗಿ ಆನೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಜಿಗಣಿ - ಹಾರೋಹಳ್ಳಿ ಮುಖ್ಯರಸ್ತೆಯ ಉರಗನದೊಡ್ಡಿ ಬಳಿ ಸಂಭವಿಸಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ‘ವನ್ಯ ಜೀವಿಗಳಿವೆ ನಿಧಾನವಾಗಿ ಚಲಿಸಿ' ಎಂದು ಸೂಚನಾಫಲಕ ಹಾಕಿದ್ದರೂ ಕೂಡ ವಾಹನ ಸವಾರರು ಮಾತ್ರ ವೇಗವಾಗಿ ವಾಹನ ಚಲಾಯಿಸುತ್ತಿದ್ದು, ಇದೀಗ ಮರಿಯಾನೆ ಅನ್ಯಾಯವಾಗಿ ಸಾವನ್ನಪ್ಪಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು, ಆನೇಕಲ್ ಅರಣ್ಯಾಧಿಕಾರಿಗಳೊಂದಿಗೆ ವನ್ಯಜೀವಿ ಸಂರಕ್ಷಾಣಾಧಿಕಾರಿಗಳು ಧಾವಿಸಿದ್ದಾರೆ.