ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನೆರಿಯ, ಭಾರೀ ಮಳೆ ಸೇತುವೆ ಮೇಲೆ ನುಗ್ಗಿದ ನೀರು  ಸಂಚಾರ  ಸಂಪೂರ್ಣ ಬಂದ್:

ನೆರಿಯ, ಭಾರೀ ಮಳೆ ಸೇತುವೆ ಮೇಲೆ ನುಗ್ಗಿದ ನೀರು  ಸಂಚಾರ  ಸಂಪೂರ್ಣ ಬಂದ್:

 

 

 

 

ಬೆಳ್ತಂಗಡಿ: ನೆರಿಯ ಸುತ್ತಮುತ್ತ ಮತ್ತೆ  ಭಾರೀ ಮಳೆಯಾಗಿದ್ದು ನದಿಯಲ್ಲಿ ಇವತ್ತೂ ಕೂಡ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ನೆರಿಯ , ಪುಲ್ಲಾಜೆ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರಕ್ಕೆ ತೊಂದರೆಯುಂಟಾಗಿದೆ. ನಿನ್ನೆ ರಾತ್ರಿ ಕೂಡ ಭಾರೀ ಮಳೆಯಾದ ಕಾರಣ ನದಿಗಳಲ್ಲಿ ಭಾರೀ ನೀರು ಏರಿಕೆಯಾಗಿ ಸೇತುವೆ ಮುಳುಗಡೆಯಾಗಿತ್ತು. ಇವತ್ತೂ ಕೂಡ ಸಂಜೆ ವೇಳೆ ನೆರಿಯ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದ ಪರಿಣಾಮ ಸೇತುವೆಯ ಮೇಲೆ ನದಿಗಳ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ನಿನ್ನೆ ಅಪಾಯದ ಮಟ್ಟದಲ್ಲಿ ನದಿಗಳು ತುಂಬಿ ಹರಿದ ಕಾರಣ ಸ್ಥಳೀಯ ಜನರು ಭಯಭೀತರಾಗಿದ್ದು ಇವತ್ತೂ ಕೂಡ ಭಾರೀ ನೀರು ನದಿಯಲ್ಲಿ ಬಂದಿರುವುದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.ಈ ಬಗ್ಗೆ ಸ್ಥಳೀಯರೊಬ್ಬರು ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿ ಸಂಜೆ ಭಾರೀ ಮಳೆಯಾಗಿದ್ದು ನದಿಗಳಲ್ಲಿ ಭಾರೀ ನೀರು ಬಂದಿದೆ. ಇದರಿಂದ ಸೇತುವೆಗಳ ಹಾಗೂ ತೋಟಗಳಿಗೆ ನೀರು ನುಗ್ಗಿದೆಯಲ್ಲದೇ ದೊಡ್ಡ ಗಾತ್ರದ ಮರಗಳೂ ನೀರಿನಲ್ಲಿ ಬರುತ್ತಿದೆ. ನಿನ್ನೆ ಕೂಡ ಇದೇ ರೀತಿ ನದಿಯಲ್ಲಿ ನೀರು ಬಂದಿದ್ದು, ರಾತ್ರಿ ಇಡೀ ನಿದ್ದೆ ಇಲ್ಲದ್ದಂತಾಗಿದ್ದು.ಇವತ್ತೂ ಕೂಡ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!