ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ: ನೂತನ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ: ನೂತನ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

ಬೆಳ್ತಂಗಡಿ : ವುಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಕ್ಷೇತ್ರ ಸಮಿತಿ ಬೆಳ್ತಂಗಡಿ ಇದರ ಪ್ರತಿನಿಧಿ ಸಭೆಯು ನಿಕಟಪೂರ್ವ ಅಧ್ಯಕ್ಷರಾದ ಶಮಾ ಅವರ ಅಧ್ಯಕ್ಷತೆಯಲ್ಲಿ ಅ.23ರಂದು ಬೆಳ್ತಂಗಡಿಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಎಸ್ ಡಿ ಪಿ ಐ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರಾದ ಹಾಜಿ ಇಬ್ರಾಹಿಂ ಸಾಗರ್ ಸಭೆಯಲ್ಲಿ ಭಾಗಿಯಾಗಿದ್ದು ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಸಮಿತಿ ಸದಸ್ಯೆ ಝಾಯಿದಾ ಪುತ್ತೂರು ಹಾಗೂ ಫಯಿನಾ ಚುನಾವಣೆ ನಡೆಸಿಕೊಟ್ಟರು.

ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಶಮಾ ಉಜಿರೆ, ಕಾರ್ಯದರ್ಶಿಯಾಗಿ ಆಯಿಶಾ ಸುನ್ನತ್ ಕೆರೆ, ಉಪಾಧ್ಯಕ್ಷರಾಗಿ ತಸ್ಲೀಮಾ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಅಝ್ಮಿಯಾ ಕುಂಟಿನಿ, ಕೋಶಾಧಿಕಾರಿಯಾಗಿ ಹಸೀನಾ ಬೆಳ್ತಂಗಡಿ ಸಮಿತಿ ಸದಸ್ಯರಾಗಿ ಸೌದಾ ಬೆಳ್ತಂಗಡಿ, ಅಶಿಕಾ ಚಾರ್ಮಾಡಿ, ಸುಮಯ್ಯ ಬಳ್ಳಮಂಜ, ಅಝ್ವಿನಾ ಚಾರ್ಮಾಡಿ, ನಸೀಮಾ ಬೆಳ್ತಂಗಡಿ, ಮರಿಯಮ್ಮ ಆಯ್ಕೆಯಾದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!